ನವದೆಹಲಿ: ಬೆಂಗಳೂರು, ಮುಂಬೈನಂತಹ ಮಹಾನಗರಗಳಲ್ಲಿ ತುರ್ತು ಕೆಲಸಗಳಿಗೆ ಓಡಾಟವಾಗಬೇಕು ಅಂದ್ರೆ ಓಲಾ, ಊಬರ್, ಆಟೋ ಸೇವೆಗಳನ್ನೇ ಅವಲಂಬಿಸಬೇಕಾಗುತ್ತದೆ. ಆದರೆ, ಮಳೆಗಾಲ, ಟ್ರಾಫಿಕ್ ಜಾಂಗಳ ಸಂದರ್ಭದಲ್ಲಿ ಈ ಖಾಸಗಿ ಕ್ಯಾಬ್ ಕಂಪನಿಗಳು ಅನುಕೂಲವಿಲ್ಲದ ಜನರನ್ನು ದುಪ್ಪಟ್ಟ ಹಣ ನೀಡುವಂತೆ ಅನಿವಾರ್ಯ ಸ್ಥಿತಿಗೆ ತಳ್ಳುತ್ತವೆ. ಇದಕ್ಕೆ ವಿರುದ್ಧವಾಗಿ ಗ್ರಾಹಕರು ಆಗಾಗ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
ಇದೀಗ ಕೇಂದ್ರ ಸರ್ಕಾರವೇ ಓಲಾ, ಊಬರ್ ಸೇರಿದಂತೆ ಎಲ್ಲಾ ಅಗ್ರಿಗೇಟರ್‌ಗಳಿಗೂ ಪೀಕ್ ಅವರ್ಗಳಲ್ಲಿ ಮೂಲ ದರದ ದ್ವಿಗುಣದಷ್ಟು (2x) ಸರ್ಜ್ ಚಾರ್ಜ್ ವಿಧಿಸಲು ಅನುಮತಿ ನೀಡಿದೆ. ಜುಲೈ 1ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಹೊಸ ಮೋಟಾರ್ ವೆಹಿಕಲ್ ಅಗ್ರಿಗೇಟರ್ ಮಾರ್ಗಸೂಚಿಗಳು (MVAG) 2025 ಪ್ರಕಟಗೊಂಡಿದೆ.
ಇದಲ್ಲದೆ, ಕ್ಯಾಬ್‌ಗಳು ಪ್ರಯಾಣಿಕರನ್ನು ಯಾವುದೇ ಕಾರಣವಿಲ್ಲದೇ ರದ್ದುಗೊಳಿಸಿದರೆ, 100 ರೂ.ಗೆ 10% ದಂಡ ವಿಧಿಸಬಹುದಾಗಿದೆ. ಮೊದಲ 3 ಕಿಮೀ ಡೆಡ್ ಮೈಲೇಜ್‌ಗೆ ಶುಲ್ಕ ವಿಧಿಸದಿರಬೇಕು ಹಾಗೂ ಎಲ್ಲಾ ಪ್ರಯಾಣಿಕರಿಗೆ ಕನಿಷ್ಠ ₹5 ಲಕ್ಷ ವಿಮೆ ಕಡ್ಡಾಯವಾಗಿರಲಿದೆ.
ಅಗ್ರಿಗೇಟರ್ ಕಂಪನಿಗಳು ಈ ನಿಯಮಗಳನ್ನು ಸ್ವಾಗತಿಸಿದ್ದು, ಸರ್ಕಾರದ ಜೊತೆ ಸಹಕರಿಸಲು ಸಿದ್ಧವಿರುವುದಾಗಿ ತಿಳಿಸಿವೆ. ಆದರೆ ಗ್ರಾಹಕರ ಬಗ್ಗೆಯೂ ಸರಕಾರ ತಕ್ಕ ಆಲೋಚನೆ ಮಾಡಬೇಕೆಂದು ಅಭಿಪ್ರಾಯ ವ್ಯಕ್ತವಾಗಿದೆ.