ಮಂಗಳೂರು (ದಕ್ಷಿಣ ಕನ್ನಡ): ಖಾಸಗಿ ಬಸ್‌ಗಳೆರಡು ಪರಸ್ಪರ ಮುಖಾಮುಖಿ ಢಿಕ್ಕಿ ಹೊಡೆದ ಘಟನೆ ಇಂದು ಮಂಗಳೂರಿನ ಸುರತ್ಕಲ್ ಸಮೀಪದ ವಸತಿ ಶಾಲೆಯ ಸಮೀಪ ನಡೆದಿದೆ.
ಎರಡೂ ಬಸ್‌ನಲ್ಲಿ ಶಾಲಾ ಮಕ್ಕಳೂ ಸೇರಿದಂತೆ ಅನೇಕ ಪ್ರಯಾಣಿಕರಿದ್ದರು. ಎರಡೂ ಬಸ್‌ಗಳ ಚಾಲಕರ ಮಧ್ಯೆ ಉಂಟಾದ ಗೊಂದಲದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.ಬಸ್ ಚಾಲಕರು ಪರಸ್ಪರ ಸರಿಯಾದ ಸಮಯಕ್ಕೆ ಬ್ರೇಕ್ ಹಾಕದೇ ಇದ್ದಿದ್ದರೆ ಅಪಾಯ ಸಂಭವಿಸಬಹುದಿತ್ತು ಎಂದು ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.
ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಆದರೆ ಬಸ್‌ಗಳ ಮುಂಭಾಗಕ್ಕೆ ಕೊಂಚ ಹಾನಿಯಾಗಿದೆ. ಘಟನೆಯಿಂದ ಕೆಲವು ಹೊತ್ತು ಟ್ರಾಫಿಕ್ ಜಾಂ ಉಂಟಾಗಿತ್ತು. ಸುರತ್ಕಲ್ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ರು.