Friday, July 4, 2025
Google search engine

Homeಸ್ಥಳೀಯಆಷಾಢ ಶುಕ್ರವಾರ: ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ಧರ್ಮ ದರ್ಶನದ ಸರತಿ ಸಾಲಿನಲ್ಲಿ ಅವಕಾಶ

ಆಷಾಢ ಶುಕ್ರವಾರ: ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ಧರ್ಮ ದರ್ಶನದ ಸರತಿ ಸಾಲಿನಲ್ಲಿ ಅವಕಾಶ

ಮೈಸೂರು: ಎರಡನೇ ಆಷಾಢ ಶುಕ್ರವಾರದಿಂದ  ಚಾಮುಂಡಿ ಬೆಟ್ಟದಲ್ಲಿ ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ಧರ್ಮ ದರ್ಶನದ ಸರತಿ ಸಾಲಿನಲ್ಲಿ ನಿಂತು ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ.

ಈ ಕುರಿತು ಶ್ರೀ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದ್ದು, ಆಷಾಢ ಮಾಸದಲ್ಲಿ ಚಾಮುಂಡಿ‌ಬೆಟ್ಟಕ್ಕೆ ಮೆಟ್ಟಿಲು ಮೂಲಕ ಹತ್ತಿ ಬರುವ ಭಕ್ತರ ದರ್ಶನಕ್ಕೆ ಸಂಬಂಧಿಸಿದಂತೆ ಮೊದಲ ಆಷಾಡ ಶುಕ್ರವಾರ ಮೆಟ್ಟಿಲುಗಳ ಮೂಲಕ ನಿರೀಕ್ಷೆಗೂ ಮೀರಿ ಹೆಚ್ಚು ಜನರ ಬಂದ ಕಾರಣ ಜನಸಂದಣಿಯಿಂದಾಗಿ ದೇವರ ದರ್ಶನ ಮೆಟ್ಟಿಲು ಹತ್ತಿ ಬಂದ ಭಕ್ತರಿಗೆ ತಡವಾಗಿತ್ತು. ಆದರೆ ಧರ್ಮದರ್ಶ‌ನ ಅಥವಾ ಟಿಕೆಟ್ ಪಡೆದು ದರ್ಶನ ಪಡೆದವರು ತ್ವರಿತಗತಿಯಲ್ಲಿ ದೇವಿಯ ದರ್ಶನ ಪಡೆದು ವಾಪಸ್ಸಾದರು.

ಈ ಹಿನ್ನೆಲೆಯಲ್ಲಿ ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ಆಗಬಹುದಾದ ಅನಾನೂಕೂಲವನ್ನು ತಪ್ಪಿಸಲು ಜಿಲ್ಲಾಡಳಿತ ಚಾಮುಂಡಿ ಬೆಟ್ಟದಲ್ಲಿ ಸಾಕಷ್ಟು ಸುಧಾರಿತ ಕ್ರಮಗಳನ್ನು ತೆಗೆದುಕೊಂಡಿದೆ. ಮುಂದಿನ ಎರಡನೇ ಆಷಾಢ ಹಾಗೂ ಉಳಿದ ಆಷಾಢ ಮಾಸದ ಶುಕ್ರವಾರಗಳಲ್ಲಿ  ಮೆಟ್ಟಿಲು ಹತ್ತಿ ಬಂದ ಭಕ್ತರು ಧರ್ಮ ದರ್ಶನದ ಸರತಿ ಸಾಲಿನಲ್ಲಿ ನಿಂತು ದರ್ಶನ ಮಾಡಬಹುದಾಗಿದೆ.

ಭಕ್ತರಿಗೆ  ನಾಡದೇವಿಯ ಸುಗಮ ದರ್ಶನಕ್ಕಾಗಿ ಲಲಿತಮಹಲ್ ಪ್ಯಾಲೇಸ್ ಆವರಣದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು ಭಕ್ತಾಧಿಗಳು ಉಚಿತ ಬಸ್ ಸೇವೆ ಪಡೆದು ಕಡಿಮೆ ಸಮಯದಲ್ಲಿ ಸುಗಮವಾಗಿ ದೇವರ ದರ್ಶನ ಪಡೆದುಕೊಳ್ಳಬಹುದಾಗಿದೆ. ಆದುದರಿಂದ ಭಕ್ತಾಧಿಗಳು ಉಚಿತ ಬಸ್ ಸೇವೆಯ ಸದುಪಯೋಗವನ್ನು ಮಾಡಿಕೊಂಡು ದೇವರ ದರ್ಶನ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES
- Advertisment -
Google search engine

Most Popular