ಬೆಂಗಳೂರು: ಕೊಟ್ಟ ಸಾಲ ತೀರಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬನು ಮನೆಗೆ ಬೆಂಕಿ ಹಚ್ಚಿದ ಘಟನೆ ವಿವೇಕ್ ನಗರದಲ್ಲಿ ಜುಲೈ 1ರಂದು ನಡೆದಿದೆ. ಬೆಂಕಿ ಹಚ್ಚಿದ ಆರೋಪಿಯನ್ನು ಸುಬ್ರಮಣಿ ಎಂದು ಗುರುತಿಸಲಾಗಿದೆ.
ಆರೋಪಿಯ ಸಹೋದರಿ ಪಾರ್ವತಿ, ತನ್ನ ಮಗಳ ಮದುವೆಗಾಗಿ ವೆಂಕಟರಮಣಿಯಿಂದ 5 ಲಕ್ಷ ರೂ. ಸಾಲ ಪಡೆದಿದ್ದರು. ವರ್ಷಗಳಾದರೂ ಹಣ ಮರಳಿಸದೆ ಇದ್ದಾಗ, ವೆಂಕಟರಮಣಿ ಹಣ ಕೇಳಿದ್ದಾರೆ. ಈ ವಿಚಾರಕ್ಕೆ ಕೋಪಗೊಂಡ ಪಾರ್ವತಿ ಹಾಗೂ ಆಕೆಯ ಮಗಳು ಗಲಾಟೆ ಮಾಡಿದ್ದು, ಬಳಿಕ ಸುಬ್ರಮಣಿ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ್ದಾನೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಠಾಣೆಗೆ ದೂರು ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.