ಹಾಸನ : ಹಾಸನದಲ್ಲಿ ಹೃದಯಾಘಾತದಿಂದ ಸಾವನಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇಂದು ಬೆಳಿಗ್ಗೆ ತ್ತಾನೆ ಯುವಕನೊಬ್ಬ ಹೃದಯಾಘಾತಕ್ಕೆ ಬಲಿಯಾಗಿದ್ದ ಇದೀಗ ಹಾಸನ ಜಿಲ್ಲೆಯಲ್ಲಿ ಮನೆಯಲ್ಲಿಯೇ ಕುಸಿದುಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಹಾಸನ ಜಿಲ್ಲೆಯ ಒಂದರಲ್ಲಿ ಇದುವರೆಗೂ ಹೃದಯಾಘಾತದಿಂದ ಸಾವನ್ನಪ್ಪಿರುವ ಒಟ್ಟು ಸಾವಿನ ಸಂಖ್ಯೆ 35 ಕ್ಕೆ ಏರಿಕೆಯಾಗಿದೆ.
ಮನೆಯಲ್ಲಿಯೇ ಹೃದಯಾಘಾತವಾಗಿ ಮಹಿಳೆ ಸಾವನಪ್ಪಿದ್ದಾರೆ 55 ವರ್ಷದ ಬಿಎನ್ ವಿಮಲಾಗೆ ಹೃದಯ ಸ್ತಂಭನವಾಗಿದೆ. ಹಾಸನದ ದಾಸರ ಕೊಪ್ಪಲಿನಲ್ಲಿ ವಿಮಲಾ ದುರ್ಮರಣ ಹೊಂದಿದ್ದಾರೆ.ನಿನ್ನೆ ರಾತ್ರಿ ಮನೆಯಲ್ಲಿದ್ದಾಗಲೇ ಹೃದಯಘಾತವಾಗಿದೆ. ತಕ್ಷಣ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅಷ್ಟರಲ್ಲಾಗಲೇ ಬಿ ಎಂ ವಿಮಲಾ ಸಾವನ್ನಪ್ಪಿದ್ದಾರೆ. ಹಾಸನದ ದಾಸನ ಕೊಪ್ಪಲಿನಲ್ಲಿ ಈ ಒಂದು ಘಟನೆ ನಡೆದಿದೆ.