ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕಳೆದ ೨೭ ವರ್ಷಗಳಿಂದ ಶಿಕ್ಷಕ ವೃತ್ತಿಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸಿ ಅವರ ಬಾಳಿಗೆ ಬೆಳಕಾಗಿರುವ ನಿವೃತ್ತ ಮುಖ್ಯ ಶಿಕ್ಷಕ ಚಿಕ್ಕಕೊಪ್ಪಲು ಟಿ.ಪುರುಷೋತ್ತಮ ಅವರ ಕಾರ್ಯ ವೈಖರಿ ಇತರರಿಗೆ ಮಾದರಿ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಗೌರವ ಸಲಹೆಗಾರ ರಾಜಶೇಖರ್ ಹೇಳಿದರು.
ಪಟ್ಟಣದ ಸಿಎಂ ರಸ್ತೆಯಲ್ಲಿರುವ ಸಾಮರಸ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ಸಂಘದ ಅಧ್ಯಕ್ಷರು ಆಗಿರುವ ಸಾಲಿಗ್ರಾಮ ತಾಲೂಕಿನ ಕೋಗಿಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಮುಖ್ಯ ಶಿಕ್ಷಕ ಟಿ.ಪುರುಷೋತ್ತಮ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಕ ವೃತ್ತಿಯನ್ನು ಅತ್ಯಂತ ಪ್ರೀತಿಯಿಂದ ಕಂಡು ಅದಕ್ಕೆ ಗೌರವ ಸಲ್ಲಿಸಿ ತಾವೂ ಕಾರ್ಯ ನಿರ್ವಹಿಸಿದ ಕಡೆಗಳಲ್ಲಿ ಪೋಷಕರು, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಮನಸ್ಸನ್ನು ಗೆದ್ದು ಅವರ ಆಶಯಕ್ಕೆ ತಕ್ಕಂತೆ ನಡೆದುಕೊಂಡಿರುವ ಇವರು ನಮಗೆ ಮಾದರಿ ಎಂದರು.
ಸತತ ಓದಿನ ಮೂಲಕ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಪಾಠ ಪ್ರವಚನ ಮಾಡುತ್ತಿದ್ದರ ಜತೆಗೆ ಹೆಚ್ಚು ರಜೆ ಪಡೆಯದೆ ನಿರಂತರವಾಗಿ ಶಾಲೆಗೆ ತೆರಳಿ ನಗುಮೊಗದಿಂದ ಕೆಲಸದಲ್ಲಿ ತೊಡಗುತ್ತಿದ್ದ ಇವರನ್ನು ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳು ನೂರಾರು ಶಿಕ್ಷಕರು ಅನುಕರಿಸುತ್ತಿದ್ದುದು ಪ್ರಶಂಸನೀಯ ಎಂದು ಸಂತಸ ವ್ಯಕ್ತಪಡಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಟಿ.ಪುರುಷೋತ್ತಮ ಸರ್ಕಾರಿ ನೌಕರಿಯಲ್ಲಿ ಕೆಲಸ ಮಾಡುವಾಗ ಇತರೆ ಇಲಾಖೆಗಳಲ್ಲಿ ನಿವೃತ್ತರಾದರೆ ಬೇಸರವಾಗುವುದಿಲ್ಲಾ ಆದರೆ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದಾಗ ಮನಸ್ಸಿಗೆ ನೋವಾಗುತ್ತದೆ ಎಂದು ತಿಳಿಸಿದರು.
ನಾನು ಸೇವೆಯಿಂದ ನಿವೃತ್ತನಾದರು ಸಹ ಶಿಕ್ಷಣ ಕ್ಷೇತ್ರಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕೆಲಸ ಮಾಡಲು ಬಯಸಿದ್ದು ಸಮಾನ ಮನಸ್ಕ ಮತ್ತು ಹಿರಿಯರೊಂದಿಗೆ ಚರ್ಚಿಸಿ ಉತ್ತಮ ಯೋಜನೆ ಹಾಗೂ ಸಮಾಜ ಮುಖಿ ಚಿಂತನೆಯೊoದಿಗೆ ಮುನ್ನಡೆಯುವ ಬಯಕೆ ವ್ಯಕ್ತಪಡಿಸಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎನ್.ಸ್ವಾಮಿ, ಮಾಜಿ ಅಧ್ಯಕ್ಷರಾದ ಒಂಟಿಮನೆ ನಾಗರಾಜು, ಸಿ.ಎನ್.ಪ್ರಭು, ಕೃಷ್ಣನಾಯಕ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸೈಯದ್ ರಿಜ್ವಾನ್, ಡಿ.ಟಿ.ಕುಮಾರ್ ಮಾತನಾಡಿದರು, ಈ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಟಿ.ಪುರುಷೋತ್ತಮ ಅವರನ್ನು ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷರು ಆತ್ಮೀಯವಾಗಿ ಅಭಿನಂದಿಸಿದರು.
ಸಾಮರಸ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶ್ರಿಧರ್, ಉಪಾಧ್ಯಕ್ಷ ಗೋವಿಂದರಾಜು, ನಿರ್ದೇಶಕಾರ ಸಿ.ಎಸ್.ಮಂಜುನಾಥ್, ಮಂಜುರಾಜು, ಕೃಷ್ಣನಾಯಕ, ಶಿವಮೂರ್ತಿ, ಮುರಳೀಧರ್, ಶೀಲಾ, ಕೆ.ಟಿ.ಸ್ವಾಮಿ, ಕಾರ್ಯದರ್ಶಿ ಕೆ.ಎಸ್.ಗಂಗಾಧರ್, ಸಹ ಕಾರ್ಯದರ್ಶಿ ವಿಜಯ್, ಪ್ರಗತಿ ಪರ ರೈತ ಸತ್ಯಪ್ಪ, ಶಿಕ್ಷಕರಾದ ಸಿ.ಜೆ.ಪುಟ್ಟಸ್ವಾಮಿ, ರವಿ, ಪುಟ್ಟಯ್ಯ, ನಾಗರಾಜು, ಸೈಯದ್‌ಖಾಧೀರ್, ಮಾದೇಗೌಡ, ಮೋಹನ್ ಮತ್ತಿತರರು ಇದ್ದರು.