ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಎರಡು ಗ್ರಾಮಗಳಿಂದ ಇಬ್ಬರು ನಾಪತ್ತೆಯಾಗಿರುವ ಕುರಿತು ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿದೆ.
ಚಿಕ್ಕನಾಯಕನಹಳ್ಳಿ ಗ್ರಾಮ ಕೆ.ಪುಷ್ಪ ಅವರು ಜೂನ್ 27 ರಂದು ಜಮೀನಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಬಂದಿಲ್ಲ ಎಂದು ಇವರ ಸಹೋದರ ಪ್ರಕಾಶ್ ದೂರು ನೀಡಿದ್ದಾರೆ. ಕಾಣೆಯಾಗಿರುವ ಪುಷ್ಪ ಅವರು 39 ವರ್ಷ ವಯಸ್ಸಿನವರಾಗಿದ್ದು, ಐದು ಅಡಿ ಎತ್ತರ , ಕೋಲು ಮುಖ ಹೊಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮಿರ್ಲೆ ಗ್ರಾಮದ ರಾಮಸ್ವಾಮಿಅವರು ಶುಕ್ರವಾರದಿಂದ ಕಾಣೆಯಾಗಿದ್ದಾರೆ ಎಂದು ಇವರ ಪುತ್ರ ಪ್ರೀತಂ ದೂರು ಸಲ್ಲಿಸಿದ್ದಾರೆ. ಕಾಣಿಯಾಗಿರುವ ರಾಮಸ್ವಾಮಿ ಅವರು 48 ವರ್ಷ, ಎತ್ತರ-5.4 ಆಡಿ, ಕೋಲುಮುಖ, ಸಾದಾರಣ ಮೈಕಟ್ಟು ಹೊಂದಿದ್ದಾರೆ ಎಂದು ದೂರಿನಲ್ಲಿ ಮಾಹಿತಿ ನೀಡಲಾಗಿದೆ.
ಇವರಗಳು ಬಗ್ಗೆ ಮಾಹಿತಿ ಸಿಕ್ಕರೇ ಸಾಲಿಗ್ರಾಮ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08223-283341 ಇಲ್ಲವೇ ಮೊಬೈಲ್ ಸಂಖ್ಯೆ 9480805062 ಅನ್ನು ಸಂಪರ್ಕಿಸುವಂತೆ ಠಾಣೆಯ ಪೊಲೀಸ್ ನಿರೀಕ್ಷ ಶಶಿಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.