ಮೈಸೂರು: ಅಪೂರ್ವ ಸ್ನೇಹ ಬಳಗದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಆಷಾಡ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ಭಕ್ತಾದಿಗಳಿಗೆ ಮೈಸೂರು ಪಾಕ್ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ್ ದಿಕ್ಷಿತ್ ರವರು ಪರಾಂಪರಿಕ ಖಾದ್ಯವಾದ ಮೈಸೂರು ಪಾಕ್ ವೈಜ್ಞಾನಿಕವಾಗಿಯ ಆರೋಗ್ಯ ಕಾಪಾಡುಕೊಳ್ಳುವಲ್ಲಿ ಸಹಕಾರಿಯಾಗುತ್ತದೆ, ಕಡಲೆಹಿಟ್ಟು ಚರ್ಮ ತ್ವಚ್ಛೆ ವೃದ್ಧಿಅಯಾಗಿ ನೈಸರ್ಗಿಕ ತುಪ್ಪ ಮನುಷ್ಯನ ಮೂಳೆಗಳಿಗೆ ಶಕ್ತಿ ನೀಡುತ್ತದೆ ಮೈಸೂರು ಪಾಕ್ ದೇಶವಿದೇಶದಲ್ಲಿ ಜನಪ್ರಿಯ ಸಿಹಿಯಾಗಿದ್ದು, ಮೈಸೂರಿಗರು ಅಷ್ಟೇ ಅಲ್ಲದೆ ಪ್ರತಿಯೊಬ್ಬರು ಕೂಡ ಹಬ್ಬಗಳಲ್ಲಿ ಹೆಚ್ಚಾಗಿ ಮೈಸೂರು ಪಾಕ್ ಬಳಸುವಲ್ಲಿ ಇಚ್ಛಿಸುತ್ತಾರೆ.
ಇದೇ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಸೋಮಣ್ಣ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮಾಜಿನಗರ ಪಾಲಿಕಾ ಸದಸ್ಯರಾದ ಜಗದೀಶ್, ಜಿ ರಾಘವೇಂದ್ರ, ಸವಿತಾ ಘಾಟ್ಕೆ, ಜಯಶ್ರೀ ಶಿವರಾಮ್ ಇನ್ನಿತರರು ಭಾಗಿಯಾಗಿದ್ದರು