ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜನಗರ ಆಶ್ರಯದಲ್ಲಿ 28ರ ಶುಕ್ರವಾರ ಸಂಜೆ 5:00 ಗಂಟೆಗೆ ರಥದ ಬೀದಿಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಾವು ಕಂಡು ಕಾಣದ ಗಾಂಧಿ ಪುಸ್ತಕ ಕುರಿತು ಪರಿಚಯಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಂಜುನಾಥ ಪ್ರಸನ್ನ ರವರು ನೆರವೇರಿಸುವರು.
ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ವಹಿಸುವರು.
ನಾವು ಕಂಡು ಕಾಣದ ಗಾಂಧಿ ಪುಸ್ತಕ ಕುರಿತು ಸಮಗ್ರ ಶಿಕ್ಷಣ ಕರ್ನಾಟಕ, ಜಿಲ್ಲಾ ಯೋಜನಾ ಉಪ ಸಮನ್ವಯ ಅಧಿಕಾರಿಗಳಾದ ಶ್ರೀ ಲಕ್ಷ್ಮಿಪತಿ ಎನ್ ಮಾತನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸೋಮಣ್ಣ ಗೌಡ ಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶೈಲ ಕುಮಾರ್, ನಿವೃತ್ತ ಜಿಲ್ಲಾ ಯೋಜನ ಸಮನ್ವಯಾಧಿಕಾರಿಗಳಾದ ಮಂಜುನಾಥ್ ಕೊಳ್ಳೇಗಾಲ, ಲೇಖಕರಾದ ಸರ್ಕಾರಿ ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯ ಮಂಗಳೂರು ಉಪನ್ಯಾಸಕರಾದ ಪ್ರಕಾಶ್ ಓ ಆರ್ ರವರು ಆಗಮಿಸಲಿದ್ದಾರೆ . ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿಕೊಳ್ಳಬೇಕೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕೋರಿದೆ.