ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕಿನಲ್ಲಿ ಎಲ್ಲಾ ನಾಲೆಗಳಿಗೆ ನೀರು ಹರಿಸುವಂತೆ ಸಿದ್ದಾಪುರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶ್ರೀರಾಮಪುರ ಪ್ರಸನ್ನ ಒತ್ತಾಯಿಸಿದ್ದಾರೆ.
ಜುಲೈ ಆರಂಭದಲ್ಲಿಯೇ ಚಾಮರಾಜ, ರಾಮಸಮುದ್ರ, ಮಿರ್ಲೆ ಶ್ರೇಣಿ, ಕಟ್ಟೆಪುರ, ಹಾರಂಗಿ ನಾಲೆಗಳಿಗೆ ನೀರು ಹರಿಸದೇ ನೀರಾವರಿ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದ್ದಾರೆ.
ನಾಲೆಯಲ್ಲಿ ನೀರು ಹರಿಸದ ಪರಿಣಾಮವಾಗಿ ಭತ್ತ ಸೇರಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯಲು ನೀರಿನ ಕೊರತೆ ಎದುರಾಗಿದ್ದು ಇದರಿಂದ ಬೆಳೆ ಸೂಕ್ತ ಸಮಯದಲ್ಲಿ ರೈತರ ಕೈಗೆ ಸಿಗದೇ ನಷ್ಟ ಅನುಭವಿಸ ಬೇಕಿದ್ದು ಸೋಮವಾರ ಒಳಗೆ ನಾಲೆಗಳಿಗೆ ನೀರು ಹರಿಸದಿದ್ದೆರೆ ಕೆ.ಆರ್.ನಗರ ನೀರಾವರಿ ಇಲಾಖೆಯ ಮುಂದೆ ರೈತರ ಜತೆಗೂಡಿ ಪ್ರತಿಭಟನೆ ನಡೆಸ ಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.