ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಸ್ಪೋಟಕ ಹೇಳಿಕೆ ನೀಡಿ, “ರಾಜ್ಯದಲ್ಲಿ ಕ್ರಾಂತಿ ಯಾವಾಗ ಬೇಕಾದರೂ ಸಂಭವಿಸಬಹುದು” ಎಂದು ಹೇಳಿದ್ದಾರೆ. ಸಚಿವ ಕೆ.ಎನ್. ರಾಜಣ್ಣ ಅವರು ಸೆಪ್ಟೆಂಬರ್‌ನಲ್ಲಿ ಕ್ರಾಂತಿ ಸಂಭವಿಸಬಹುದು ಹೇಳಿಕೆಯ ಬೆನ್ನಲ್ಲೇ ಈ ಪ್ರತಿಕ್ರಿಯೆ ಬಂದಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಂದರ್ಭದಲ್ಲೇ ತನ್ವೀರ್ ಸೇಠ್, ಸಿಎಂ ಬದಲಾವಣೆಯ ಬಗ್ಗೆ ಮಾತನಾಡಲು ನಿರಾಕರಿಸಿದರು. “ನಮ್ಮ ಉದ್ದೇಶ ಐದು ವರ್ಷಗಳ ಸುಭದ್ರ ಆಡಳಿತ ನೀಡುವುದು. ಪಕ್ಷದಿಂದ ಸರ್ಕಾರ ಬಂದಿದೆ, ಆದರೆ ಸರ್ಕಾರದಿಂದ ಪಕ್ಷ ಬರದು,” ಎಂದು ಅವರು ಹೇಳಿದರು. ಅಧಿಕಾರ ಶಾಶ್ವತವಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ಅವರು ಆಶಿಸಿದರು ಮತ್ತು “ನಾನು ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ,” ಎಂದರು. ಡಿಸಿಎಂ ಡಿ.ಕೆ. ಶಿವಕುಮಾರ್ ಬಗ್ಗೆ ಕೇಳಿದ ಪ್ರಶ್ನೆಗೆ, “ಯಾರೋ ಮಾತನಾಡಿದ್ದಾರೆಂದು ಪ್ರತಿಕ್ರಿಯೆ ನೀಡುವುದಿಲ್ಲ” ಎಂದರು.
ಸಂಪುಟ ಪುನಾರಚನೆಯ ಕುರಿತಾಗಿ ಮಾತನಾಡಿದ ಅವರು, “ಅದು ಯಾವಾಗ ಬೇಕಾದರೂ ಸಂಭವಿಸಬಹುದು. ನನಗೆ ಅವಕಾಶ ಸಿಗಬೇಕೆಂಬ ನಂಬಿಕೆ ಇದೆ. ಸಿಕ್ಕಾಗ ಕೆಲಸ ಮಾಡುತ್ತೇನೆ,” ಎಂದು ಆತ್ಮವಿಶ್ವಾಸದಿಂದ ಹೇಳಿದರು.