ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಅರಸನ ಅರಮನೆಗೆ ಕಾರ್ಮೋಡ ಕವಿದಿತು ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ದೊಡ್ಡಬೇಲಾಳು ಗ್ರಾಮದ ಬಳಿ ಮೈಸೂರಿನ ನಮನ್ ಫೌಂಡೇಶನ್ ವತಿಯಿಂದ ನೂತನವಾಗಿ ನಿರ್ಮಾಣವಾಗಲಿರುವ ಧ್ಯಾನ ಕೇಂದ್ರ ಸ್ಥಳಕ್ಕೆ ಖಾಸಗಿ ಭೇಟಿ ವೇಳೆ ಭವಿಷ್ಯ ನುಡಿದಿದ್ದಾರೆ.

ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವವರಿಗೆ ಮುಂದಿನ ದಿನಗಳಲ್ಲಿ ತೊಂದರೆ, ಮುಂದಾಗುವ ಸಮಸ್ಯೆ ಅರಿತು ಈಗಲೇ ಪರಿಹಾರ ಮಾಡಿಕೊಂಡರೆ ಸೂಕ್ತ ಎಂದರು.
ಯುದ್ಧಗಳು ಮುಂದುವರೆಯುತ್ತವೆ ಮನಸ್ಸುಗಳು ನಿಂತಾಗ ಮಾತ್ರ ಯುದ್ಧ ನಿಲ್ಲುತ್ತದೆ, ಮುಂದೊಂದು ದಿನ ವಿಶ್ವವೇ ತಿರುಗಿ ನೋಡುವಂತಹ ಆಘಾತ ಭಾರತ ದೇಶಕ್ಕೆ ಕಾದಿದೆ ಎಂದರು.
ಮನುಷ್ಯ ಮೌನವಾಗಿದ್ದರೆ ಹೆಚ್ಚು ಜ್ಞಾನ ಸಂಪಾದನೆ ಮಾಡಬಹುದು, ಪ್ರಕೃತಿ ಹಾಗೂ ವೃಕ್ಷಗಳಿಗೆ ತನ್ನದೇ ಆದ ಅಗಾಧ ಶಕ್ತಿ ಇದ್ದು ಮರಣ ಗೆಲ್ಲುವ ಶಕ್ತಿ ಗಿಡಮೂಲಿಕೆ ಔಷಧಿಗಳಲ್ಲಿದೆ, ಪಂಚತಾರಾ ವೃಕ್ಷಗಳಲ್ಲಿ ಹೆಚ್ಚು ಆಮ್ಲಜನಕ ಉತ್ಪಾದನೆಯಾಗಲಿದ್ದು ದೈವ ವೃಕ್ಷಗಳಾಗಿವೆ, 84 ಲಕ್ಷ ಜೀವ ರಾಶಿಗಳಲ್ಲಿ ಆತ್ಮ ಕಡೆಯದಾಗಿದ್ದು ಮಾನವನಿಗೆ ಜ್ಞಾನ ಹಾಗೂ ವಿವೇಕ ನೀಡಲಾಗಿದೆ. ಇದನ್ನು ಸನ್ಮಾರ್ಗದಲ್ಲಿ ಬಳಸಿಕೊಂಡಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗಲಿದೆ.
ಧ್ಯಾನ ಕೇಂದ್ರಗಳು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಲಿದ್ದು ಈ ನಿಟ್ಟಿನಲ್ಲಿ ನಮನ್ ಫೌಂಡೇಶನ್ ವತಿಯಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ಧ್ಯಾನ ಕೇಂದ್ರ ಜಗತ್ತಿಗೆ ಪರಿಚಿತವಾಗಿ ಮಾದರಿಯಾಗಲಿದೆ ಎಂದು ಶುಭ ಕೋರಿದರು.

ನಮನ್ ಫೌಂಡೇಶನ್ ಅಧ್ಯಕ್ಷೆ ಶೈಲಜಾ ಪ್ರಸಾದ್, ಕಾರ್ಯದರ್ಶಿ ದೀಪ್ತಿ ರಾಜೇಶ್ವರಿ,
ಉಪಾಧ್ಯಕ್ಷೆ ಉಪಾಗ್ಯ ನವಳ ನಂದಿಕಾ, ಖಜಾಂಚಿ ಮಂಜುನಾಥ್ ಪಿ ಹೆಗಡೆ, ಸಂಯೋಜಕರಾದ ಐಶ್ವರ್ಯ ಪಿ ಹೆಗಡೆ ಮತ್ತಿತರಿದ್ದರು.