Tuesday, July 15, 2025
Google search engine

HomeUncategorizedರಾಷ್ಟ್ರೀಯವಿಮಾನಗಳ ಇಂಧನ ಸ್ವಿಚ್‌ ಪರೀಕ್ಷೆಗೆ ಡಿಜಿಸಿಎ ಸೂಚನೆ

ವಿಮಾನಗಳ ಇಂಧನ ಸ್ವಿಚ್‌ ಪರೀಕ್ಷೆಗೆ ಡಿಜಿಸಿಎ ಸೂಚನೆ

ಮುಂಬಯಿ: ಏರ್ ಇಂಡಿಯಾ ದುರಂತದಲ್ಲಿ ಇಂಧನ ನಿರ್ವಹಣಾ ಸ್ವಿಚ್‌ ಆಫ್ ಆಗಿರುವುದು ಕಾರಣವೆಂದು ತನಿಖಾ ವರದಿ ತಿಳಿಸಿದ ಬಳಿಕ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬೋಯಿಂಗ್ 787 ಹಾಗೂ 737 ಮಾದರಿಯ ವಿಮಾನಗಳಲ್ಲಿನ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆ ತಪಾಸಣೆ ಮಾಡುವಂತೆ ದೇಶದ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಅಮೆರಿಕದ ಎಫ್‌ಎಎ ಈಗಾಗಲೇ 2018ರಲ್ಲಿ ಈ ಸಮಸ್ಯೆ ಗುರುತಿಸಿತ್ತು. ಸಂಸ್ಥೆಗಳು ಜುಲೈ 21ರೊಳಗೆ ಪರೀಕ್ಷೆ ಪೂರ್ಣಗೊಳಿಸಬೇಕು. ಯುಎಇ ಮೂಲದ ಎತಿಹಾದ್ ಮತ್ತು ದಕ್ಷಿಣ ಕೊರಿಯಾ ವಿಮಾನಯಾನ ಸಂಸ್ಥೆಗಳು ಈಗಾಗಲೇ ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿವೆ. ಇಂಧನ ನಿರ್ವಹಣಾ ವ್ಯವಸ್ಥೆ ಪ್ರತಿ ವಿಮಾನದಲ್ಲಿ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದರ ಪರಿಶೀಲನೆ ಅವಶ್ಯಕವಾಗಿದೆ.

RELATED ARTICLES
- Advertisment -
Google search engine

Most Popular