Wednesday, July 16, 2025
Google search engine

Homeರಾಜ್ಯಇಂದು ಹುಟ್ಟೂರಾದ ದಶವಾರ ಗ್ರಾಮದಲ್ಲಿ ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ

ಇಂದು ಹುಟ್ಟೂರಾದ ದಶವಾರ ಗ್ರಾಮದಲ್ಲಿ ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ

ಬೆಂಗಳೂರು: ಹಿರಿಯ ನಟಿ ಬಿ. ಸರೋಜಾದೇವಿ ನಿಧನರಾಗಿದ್ದು, ಇಂದು ಮಧ್ಯಾಹ್ನ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಒಕ್ಕಲಿಗ ಸಂಪ್ರದಾಯದಂತೆ ತಾಯಿ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ನಿನ್ನೆ ಬೆಂಗಳೂರಿನ ಮಲ್ಲೇಶ್ವರಂ ನಿವಾಸದಲ್ಲಿ ಬಿ ಸರೋಜಾದೇವಿ ಸಾವನ್ನಪ್ಪಿದ್ದಾರೆ. ಸರೋಜಾದೇವಿಯವರು ವಯೋ ಸಹಜ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಅಭಿನಯ ಸರಸ್ವತಿಯಂದೆ ಸರೋಜಾದೇವಿ ಖ್ಯಾತಿ ಹೊಂದಿದ್ದರು. ಸುಮಾರು ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಐದು ಭಾಷೆಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಸರೋಜಾ ದೇವಿ ನಟಿಸಿದ್ದಾರೆ.

ಮಲ್ಲೇಶ್ವರಂನ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆ ಬೆಂಗಳೂರಿನ ಕೋಡಿಗೆಹಳ್ಳಿಯಲ್ಲಿ ಪತಿ ಹರ್ಷ ಸಮಾಧಿ ಪಕ್ಕದಲ್ಲಿ ನಡೆಯಲಿದೆ. 1938 ಜನವರಿ 7ರಂದು ಜನಿಸಿದ ಸರೋಜಾದೇವಿ, ಕೇವಲ 17ನೇ ವಯಸ್ಸಿನಲ್ಲಿ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಅವರಿಗೆ ಪದ್ಮಶ್ರೀ (1969) ಮತ್ತು ಪದ್ಮಭೂಷಣ (1992) ಪ್ರಶಸ್ತಿಗಳು ಲಭಿಸಿದ್ದವು.

RELATED ARTICLES
- Advertisment -
Google search engine

Most Popular