Sunday, April 20, 2025
Google search engine

Homeಸ್ಥಳೀಯಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕಾರ

ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕಾರ


ಮೈಸೂರು: ನಗರ ಪಾಲಿಕೆಯ ನೂತನ ಆಯುಕ್ತರಾಗಿ ಅಸಾದ್ ಉರ್ ರೆಹಮಾನ್ ಶರೀಫ್ ಅವರು ಅಧಿಕಾರ ಸ್ವೀಕರಿಸಿದರು.
ನಗರ ಪಾಲಿಕೆ ಆಯುಕ್ತರಾಗಿದ್ದ ಜಿ.ಲಕ್ಷ್ಮೀಕಾಂತರೆಡ್ಡಿ ಅವರು ವರ್ಗಾವಣೆ ಆದ ಹಿನ್ನೆಲೆಯಲ್ಲಿ ಕೆಎಂಎಎಸ್‌ನ ಗ್ರೇಡ್ ೧ ಅಧಿಕಾರಿ ಅಸಾದ್ ಉರ್ ರೆಹಮಾನ್ ಶರೀಫ್ ಅವರನ್ನು ನಗರ ಪಾಲಿಕೆ ಆಯುಕ್ತರಾಗಿ ಸರ್ಕಾರ ನೇಮಿಸಿದೆ. ಎಸ್‌ಬಿಎಂನ ಜಂಟಿ ನಿರ್ದೇಶಕರಾಗಿ, ಬೆಂಗಳೂರು ಪೌರಾಡಳಿತ ಇಲಾಖೆ ನಿರ್ದೇಶಕರಾಗಿದ್ದ ಶರೀಫ್ ಅವರು ಹಲವು ವರ್ಷಗಳ ಹಿಂದೆ ಡಿಯುಡಿಸಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಈ ವೇಳೆ ಮಾತನಾಡಿದ ಅವರು, ಮೈಸೂರು ನಗರದ ಸ್ವಚ್ಛತೆ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಕ್ಕೆ ಹೆಚ್ಚು ಗಮನ ಹರಿಸುವುದಾಗಿ ತಿಳಿಸಿದ್ದಾರೆ. ಲಕ್ಷ್ಮೀಕಾಂತರೆಡ್ಡಿ ಅವರು ಎರಡು ವರ್ಷಕ್ಕೂ ಹೆಚ್ಚು ಕಾಲ ಆಯುಕ್ತರಾಗಿ ಕಾರ್ಯ ನಿರ್ವಹಿಸಿದರು. ಇವರಿಗೆ ಸರ್ಕಾರ ಸ್ಥಳ ನಿಯೋಜಿಸಿಲ್ಲ.

RELATED ARTICLES
- Advertisment -
Google search engine

Most Popular