Sunday, January 18, 2026
Google search engine

Homeರಾಜ್ಯಸುದ್ದಿಜಾಲಬೆಳ್ಳಂಬೆಳಿಗ್ಗೆ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳು: ಮಾವಿನ ಮರ, ತೆಂಗಿನ ಮರಗಳ ನಾಶ

ಬೆಳ್ಳಂಬೆಳಿಗ್ಗೆ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳು: ಮಾವಿನ ಮರ, ತೆಂಗಿನ ಮರಗಳ ನಾಶ

ಹನೂರು: ಪೊನ್ನಾಚ್ಚಿ ಗ್ರಾಮದ ಜಮೀನೊಂದಕ್ಕೆ  ಕಾಡಾನೆಗಳು ಬೆಳ್ಳಂ ಬೆಳಗ್ಗೆ ಲಗ್ಗೆಇಟ್ಟಿದ್ದು, ವಿವಿಧ ಮರಗಳನ್ನು  ಧ್ವಂಸ ಮಾಡಿವೆ.

ಹನೂರು ತಾಲ್ಲೂಕಿನ  ಪೊನ್ನಚಿ ಗ್ರಾಮದ ರಾಮದಪ್ಪ ಎಂಬುವವರ ಜಮೀನಿಗೆ ಇಂದು ಕಾಡಾನೆಗಳು ದಾಳಿ ಮಾಡಿದ್ದು, ಪರಿಹಾರಕ್ಕಾಗಿ ರೈತ ಒತ್ತಾಯಿಸಿದ್ದಾರೆ.

ಜಮೀನಿನಲ್ಲಿ ಬೆಳೆಯಲಾಗಿದ್ದ ಮಾವಿನಮರಗಳು,  ಸುಮಾರು 20 ತೆಂಗಿನ ಮರಗಳನ್ನು ಕಾಡಾನೆಯೊಂದು ಲಗ್ಗೆ ಇಟ್ಟು ಧ್ವಂಸಗೂಳಿಸಿದೆ.

 ಈ ಭಾಗದಲ್ಲಿ ಕಾಡಾನೆಗಳ ಉಪಟಳ ನಿರಂತರವಾಗಿ ನಡೆಯುತ್ತಿದ್ದು, ಈ ಘಟನೆ ಸಂಬಂಧ ಪರಿಹಾರಕ್ಕಾಗಿ ರೈತ ರಾಮದಪ್ಪ ಒತ್ತಾಯವನ್ನು ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular