ಬೆಂಗಳೂರು : ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹದಾಯಿ ಹಾಗೂ ಮೇಕೆದಾಟು ವಿಚಾರದಲ್ಲಿ ಬಿಜೆಪಿ ಸಂಸದರ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದ್ದು, ಇದ್ರಿಂದಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಲ್ಲಿ ಮಾತಾಡಿದ ಡಿಕೆ ಸುರೇಶ್, ಕರ್ನಾಟಕ ಗೋವಾ ಅನ್ಯೋನ್ಯವಾಗಿತ್ತು. ಆದ್ರೆ ಉತ್ತರ ಕರ್ನಾಟಕದ ಮಂದಿಗೆ ಈಗ ನೀರಾವರಿ ಯೋಜನೆಯಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಗೋವಾ ಬಿಜೆಪಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಇದನ್ನು ಗಮನಿಸಿ ನಮ್ಮ ರಾಜ್ಯದ ಸಂಸದರು ತುಟಿಕ್ ಪಿಟಿಕ್ ಅನ್ನದೇ ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ 20 ಮಂದಿ ಕರ್ನಾಟಕದ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡ್ತಿಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದಕ್ಕೆ ಕರ್ನಾಟಕದ ಕೊಡುಗೆ ಹೆಚ್ಚಿದೆ. ಹೀಗಾಗಿ ಬಿಜೆಪಿ ಸಂಸದರು ಕೇಂದ್ರದ ಗಮನ ಸೆಳೆದು ನೀರಾವರಿ ಸವಲತ್ತುಗಳನ್ನು ದೊರಕಿಸಿಕೊಡಬೇಕು ಎಂದು ಹೇಳಿದರು.
ಪ್ರಲ್ಹಾದ್ ಜೋಶಿ 10 ವರ್ಷದಿಂದ ಮಂತ್ರಿಯಾಗಿದ್ದಾರೆ. ಪ್ರಧಾನಿ ಮೋದಿ ಹಾಗೂ ನೀರಾವರಿ ಸಚಿವರಿಗೆ ಉತ್ತಮ ಸ್ನೇಹಿತರಾಗಿದ್ದಾರೆ. ಆದ್ರೆ ಅವರು ಉತ್ತರ ಕರ್ನಾಟಕದ ನೀರಿನ ಸಮಸ್ಯೆ ಬಗೆಹರಿಸುವ ವಿಚಾರದಲ್ಲಿ ಫೇಲ್ ಆಗಿದ್ದಾರೆ ಎಂದು ಡಿಕೆ ಸುರೇಶ್ ಟೀಕಿಸಿದರು.
ಇನ್ನು ಮೊನ್ನೆಯಷ್ಟೇ ಡಿಕೆಶಿ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಬೆಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ್ದ ಡಿಕೆ ಸುರೇಶ್ ವಿಪಕ್ಷಗಳನ್ನು ರಾಜಕೀಯವಾಗಿ ಬಗ್ಗು ಬಡಿಯೋಕೆ ಇಡಿಯನ್ನು ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ದ್ವೇಷ ರಾಜಕರಣ ಬಿಟ್ಟು ಅಭಿವೃದ್ಧಿ ರಾಜಕಾರಣಕ್ಕೆ ಹೆಚ್ಚು ಚಿಂತನೆಯನ್ನು ಮಾಡಬೇಕು ಎಂದು ಹೇಳಿದ್ದರು.
ದೇಶದ ವಿವಿಧೆಡೆ ಇಡಿಯನ್ನು ರಾಜಕೀಯ ನಾಯಕರನ್ನು ಸದೆಬಡಿಯೋಕೆ ಉಪಯೋಗ ಮಾಡಿಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಸುಪ್ರೀಂ ತೀರ್ಪು ನೀಡಿದ್ದು, ನ್ಯಾಯದ ಮೇಲಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದ್ದರು.
ಇನ್ನು, ಧರ್ಮಸ್ಥಳದಲ್ಲಿ ಅಸಹಜ ಸಾವಿನ ತನಿಖೆ ಕುರಿತು ಸರ್ಕಾರ SIT ರಚನೆ ಮಾಡಿರುವ ಕುರಿತು ಡಿಕೆಸುರೇಶ್ ಪ್ರತಿಕ್ರಿಯೆ ನೀಡಿದರು. ಧರ್ಮಸ್ಥಳ ಶ್ರೀ ಕ್ಷೇತ್ರವನ್ನು ನಂಬಿ ಕರ್ನಾಟಕದ ಅನೇಕ ಜನ ಪೂಜೆ ಪುನಸ್ಕಾರ ಮಾಡ್ತಿದ್ದಾರೆ.SIT ರಚನೆಯಾಗಿದೆ. ಇದ್ರಿಂದ ಜನರ ಅನುಮಾನ ಬಗೆಹರಿಯುತ್ತೆ. ಹಿಂದೂಗಳ ಅನ್ಯಾಯ ವನ್ನು ಸರಿ ಮಾಡಬೇಕು. ಕ್ಷೇತ್ರದ ಪಾವಿತ್ರ್ಯತೆ ಉಳಿಸಿಕೊಳ್ಳಬೇಕು. ಇದೇ ವಿಚಾರದಲ್ಲಿ ರಾಜಕೀಯ ಕೆಸರೆರೆಚಾಟ ನಿಲ್ಲಬೇಕು. ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯಿಲ್ಲ.ನಾನು ಕೂಡ ಪ್ರತಿವರ್ಷ ಮಂಜುನಾಥನ ದರ್ಶನ ಪಡೆಯುತ್ತೇನೆ. SIT ತನಿಖೆಯಲ್ಲಿ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಾಗಬೇಕು. ಯಾರಿಗೂ ಅಪಮಾನ ಮಾಡುವ ಉದ್ದೇಶದಿಂದ SIT ರಚನೆ ಯಾಗಿಲ್ಲ ಎಂದು ಡಿಕೆಸು ಸ್ಪಷ್ಟಪಡಿಸಿದ್ದರು.