ಹುಣಸೂರು: ಸ್ನೇಹ ಬಯಸಿ ಬಸ್ಸನ್ನೇರಿದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯ ನಿಲುವನ್ನು ದಿಕ್ಕರಿಸಿ ದಾಳಿ ಮಾಡಿದ ಪಾಕಿಸ್ತಾನದ ವೈಖರಿಗೆ ಪ್ರತುತ್ತರ ನೀಡಿದ ಅಪರೇಷನ್ ವಿಜಯ್. ಕಾರ್ಗಿಲ್ ವಿಜಯ್ ದಿವಸ್ ಆಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಮಾಜಿ ಸೈನಿಕ ಲೂಯಿಸ್ ಪೆರೇರಾ ತಿಳಿಸಿದರು.
ನಗರದ ರೋಟರಿ ಕ್ಲಬ್ ವತಿಯಿಂದ 26ನೇ ಕಾರ್ಗಿಲ್ ವಿಜಯ್ ದಿವಸ್ ದಿನವನ್ನು ರೋಟರಿ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ತನ್ನ ನೀಚಬುದ್ದಿಯಿಂದ ತನ್ನ ಅಸ್ತಿತ್ವವನ್ನು ಕಳದುಕೊಂಡು ಆರ್ಥಿಕ ಒಡೆತಕ್ಕೆ ಗುರಿಯಾಗಿ ಮಾನವೀಯ ಗುಣಗಳಿಂದ ಹೊರಗುಳಿದಿದೆ ಎಂದರು.
ಮತ್ತೊಬ್ಬ ಮಾಜಿ ಸೈನಿಕ ಹಾಗೂ ಎಸ್.ಬಿ.ಐ. ಬ್ಯಾಂಕಿನ ಕ್ಯಾಸಿಯರ್ ಕುಡಿನೀರು ಮುದ್ದನಹಳ್ಳಿ ಗ್ರಾಮದ ಮಂಜುನಾಥ್, ಸನ್ಮಾನ ಸ್ವೀಕರಿಸಿ ಮಾತನಾಡಿ, ಬ್ರಿಟಿಷರು ಮತ್ತು ಬದ್ದ ವೈರಿಗಳ ವಿರುದ್ದ ಹೋರಾಡಲು ಭಾರತೀಯರು ಬಲಿಷ್ಠರಿದ್ದ ಕಾರಣ. ಇಂದು ಇಡೀ ದೇಶದಗಲಕ್ಕೂ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲು ಸಾಧ್ಯವಾಗಿದೆ ಎಂದರು.

ಕಾರ್ಗಿಲ್ ವಿಜಯ್ ದಿವಸ್ ದಿನಂದು ನಮ್ಮಂತಹವರ ದೇಶ ಸೇವೆ ಗುರುತ್ತಿಸಿ ಹುಣಸೂರು ರೋಟರಿ ಕ್ಲಬ್ ಗೌರವಿಸುತ್ತಿರುವುದು ಶ್ಲಾಘನೀಯವಾಗಿದ್ದು, ರೋಟರಿ ಸೇವೆ ಮಾನವೀಯತೆಯ ಸಂಕೇತವಾಗಿದೆ ಎಂದರು.
ಮತ್ತೊಬ್ಬ ಮಾಜಿ ಸೈನಿಕ ಹದಕನೆಂಟು ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ, ಇದೀಗ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಮಾತನಾಡಿ, ದೇಶ ಸೇವೆ ಮಾಡಲು ತುದಿಗಾಲಲ್ಲಿ ನಿಂತಿದ್ದ ನಮಗೆ ಅಂದು ಸೈನ್ಯ ಸೇರಿದ್ದು ನಮ್ಮ ಸೌಭಾಗ್ಯವೆಂದರು. ಅದೇ ರೀತಿ ದೇಶ ಸೇವೆ ಅಭಿಮಾನದ ಸಂಕೇತ ವಾಗಿದೆ ಎಂದರು.
ಹುಣಸೂರು ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಆರ್.ಕೃಷ್ಣ ಕುಮಾರ್ ಮಾತನಾಡಿ, ದೇಶ ಕಾಯುವ ಸೈನಿಕ , ದೇಶಕ್ಕೆ ಅನ್ನ ನೀಡುವ ರೈತ ವಿದ್ಯ ಕಲಿಸುವ ಗುರು ಹಾಗೂ ಜನ್ನ ನೀಡುವ ತಂದೆ, ತಾಯಿಯ ಋಣವನ್ನು ಜೀವನಪೂರ್ತಿ ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಧರ್ಮಾಪುರ ಶ್ಯಾಮಣ್ಣ, ರೋಟರಿ ಹಿರಿಯರಾದ ಆನಂದ್ ಆರ್, ರಾಜಶೇಖರ್, ಡಾ.ಸರೋಜಿನಿ ವಿಕ್ರಂ, ಜಿ.ವಿ.ಶ್ರೀನಾಥ್, ರೋಟರಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ದೀಪ, ಪ್ರಸನ್ನ, ಶಿಕ್ಷಕ ಅಕ್ಮಲ್, ಶ್ರೀನಿವಾಸ್ ಮತ್ತು ಸಿಬ್ಬಂದಿ ವರ್ಗವಿದ್ದರು.