ಸಹ ಪ್ರಯಾಣಿಕನ ಚೀಲಕ್ಕೆ ೩.೫ ಕೆಜಿ ಚಿನ್ನದ ಗಟ್ಟಿ ತುಂಬಿ ವ್ಯಕ್ತಿ ಪರಾರಿ
ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದಿದ್ದ ಪ್ರಯಾಣಿಕನೊರ್ವ ತನ್ನ ಸಹ ಪ್ರಯಾಣಿಕನ ಕೈಯಲಿದ್ದ ಚೀಲಕ್ಕೆ ೩.೫ ಕೆಜಿ ಚಿನ್ನದ ಗಟ್ಟಿಗಳನ್ನು ತುಂಬಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದಿರುವ ಪ್ರಯಾಣಿಕ, ಕಸ್ಟಮ್ ಅಧಿಕಾರಿಗಳನ್ನು ಕಂಡು ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ. ತನ್ನ ಚೀಲದಲ್ಲಿ ಚಿನ್ನವನ್ನು ಕಂಡು ಸಹ ಪ್ರಯಾಣಿಕ ತಕ್ಷಣವೇ ಕಸ್ಟಮ್ಸ್ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಪರಿಶೀಲನೆ ನಡೆಸಿದಾಗ ೩.೫ ಕೆ.ಜಿ ಚಿನ್ನ ಇರುವುದು ಪತ್ತೆಯಾಗಿದೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿನೀಡಿದ್ದಾರೆ.