ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಬದುಕಿನಲ್ಲಿ ಯಾವುದೇ ಸಾಧನೆಯ ಹಿಂದೆ ಗುರುಗಳ ಮಾರ್ಗದರ್ಶನ ಜೀವನುದುದ್ದಕ್ಕೂ ಅಗತ್ಯ, ಅದರಲ್ಲಿಯೂ ಬದುಕಿನ ಆರಂಭದ ಮೆಟ್ಟಿಲುಗಳನ್ನು ಕಲಿಸುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನಂತೂ ಮೆರೆಯಲು ಅಸಾಧ್ಯ ಎಂದು ಸಾಲಿಗ್ರಾಮ ತಾಲೂಕು ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಕೃಷ್ಣ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಗ್ರಾಮದ ಡಾ.ಬಿ.ಅರ್.ಅಂಬೇಡ್ಕರ್ ಪ್ರೌಡಶಾಲೆಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಆದರೆ ಕಲಿತ ವಿದ್ಯೆ ಜತಗೆ ಶಿಸ್ತು ಬದ್ದ ಜೀವನ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ ಇದನ್ನು ಕಲಿಸಿದ ಶಿಕ್ಷಕರಿಗೆ ನಾವು ಸದಾ ಋಣಿ ಅಗಿರ ಬೇಕು ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಯತೀಶ್ ಮಾತನಾಡಿ ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದ ಅವರು ತಾವು ಓದಿದ ಶಾಲೆ ಮತ್ತು ಅಕ್ಷರ ಕಲಿಸಿ ಕೊಟ್ಟ ಶಿಕ್ಷಕರನ್ನು ಗೌರವಿಸುವ ಕೆಲಸ ಮಾಡಿದಾಗ ಶಿಕ್ಷಕರ ವೃತ್ತಿ ಗೌರವ ಮತ್ತು ವಿದ್ಯಾರ್ಥಿಗಳ ಒಡನಾಟ ಹೆಚ್ಚಲು ಸಹಕಾರಿ ಅಗಲಿದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಯತೀಶ್, ಶಿಕ್ಷಕರಾದ ರೇವಣ್ಣ, ಎಚ್.ಪಿ.ಶಂಕರ್, ಕೆ.ಕೃಷ್ಣ,ತುಳಸಿರಾಮೇಗೌಡ, ಪಿ.ಮಹದೇವಸ್ಚಾಮಿ, ವೃತ್ತಿ ಶಿಕ್ಷಕ ಎಂ.ಶಿವಣ್ಣ, ದೈಹಿಕ ಶಿಕ್ಷಕ ಶಿವಣ್ಣ ಅವರನ್ನು ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎಂ.ಶಿವಕುಮಾರ್ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಕಾರ್ಗಿಲ್ ವಿಜಿಯೋತ್ಸವ ದಿನ ಅಚರರಣೆ ಮಾಡಿ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೊಸಕೋಟೆ ಗ್ರಾ.ಪಂ.ಉಪಾಧ್ಯಕ್ಷ ಸುಧಾಶಂಕರಪ್ಪ, ಸದಸ್ಯರಾದ ಬೆಣಗನಹಳ್ಳಿ ಬಿ.ಅರ್.ನಟರಾಜು, ನಿಜಗನಹಳ್ಳಿ ಪುನಿತ್, ದೇವೆಂದ್ರ ಹೊಸಕೋಟೆ ಕೊಪ್ಪಲು ಡೈರಿ ಮಾಜಿ ಅಧ್ಯಕ್ಷ ಜಲೇಂದ್ರ, ಉದ್ಯಮಿ ಆನಂತ್ ಹೊಸಕೋಟೆ , ಹಳೆಯ ವಿಧ್ಯಾರ್ಥಿಗಳಾದ ಚಂದು, ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.