ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ
ಪೂಜ್ಯ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳವರ ಚಾತುರ್ಮಾಸ್ಯದಲ್ಲಿ ಡಾ. ಪೃಥು ಪಿ ಅದ್ವೈತ್ ಸ್ತೋತ್ರ ಪಠಿಸಿ ಗುರುಗಳ ಪ್ರಶಂಸೆಗೆ ಪಾತ್ರನಾಗಿ ಶ್ರೀಗಳು ಪೃಥುವಿಗೆ ಗೌರವ ಪ್ರಶಸ್ತಿ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಈಗಾಗಲೇ ಸ್ತೂತ್ರ ಪಠಣದಲ್ಲಿ ವಿಶ್ವದಾಖಲೆ ನಿರ್ಮಿಸಿರುವ ಎಂಟು ವರ್ಷದ ಬಾಲಕ ಪೃಥು ಪಿ ಅದ್ವೈತ್ ನನ್ನು ಆಶೀರ್ವದಿಸಿ ಅನುಗ್ರಹಿಸಿ ಮತ್ತಷ್ಟು ಆಧ್ಯಾತ್ಮಿಕ ವಿಚಾರಗಳಲ್ಲಿ ಸಾಧನೆ ಮಾಡಲು ತಿಳಿಸದರು.