ಬೆಂಗಳೂರು: ಸುಮಾರು 38 ತಿಂಗಳ ಹಿಂಬಾಕಿ ವೇತನ ಬಿಡುಗಡೆ, ಹೊಸ ವೇತನ ಪರಿಷ್ಕರಣೆ ಮತ್ತು 2021ರ ಮುಷ್ಕರದ ವೇಳೆ ವಜಾಗೊಂಡ ನೌಕರರ ಮರು ನೇಮಕಾತಿಗೆ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ನಾಲ್ಕು ಸಾರಿಗೆ ನಿಗಮಗಳ ನೌಕರರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಈಗಾಗಲೇ ಸಿಎಂ ಹಾಗೂ ನಿಗಮಗಳ ವ್ಯವಸ್ಥಾಪಕರಿಗೆ ನೋಟೀಸ್ ನೀಡಿದ್ದಾರೆ. ನೌಕರರ ಮುಖ್ಯ ಬೇಡಿಕೆಗಳು – ಬಾಕಿ ವೇತನ ಬಿಡುಗಡೆ ಮತ್ತು ನೂತನ ವೇತನ ಪರಿಷ್ಕರಣೆ.
ಸರ್ಕಾರ ಗಮನ ಹರಿಸದಿದ್ದರೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿ ಹೋರಾಟವನ್ನು ತೀವ್ರಗೊಳಿಸಲು ಅವರು ಸನ್ನದ್ಧರಾಗಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ಎಸ್ಮಾ ಅಥವಾ ವಜಾ ತಂತ್ರಗಳಿಗೂ ಹೆದರುವುದಿಲ್ಲ ಎಂದು ಎಚ್ಚರಿಸಿದ್ದಾರೆ.