Sunday, August 3, 2025
Google search engine

Homeಅಪರಾಧಧರ್ಮಸ್ಥಳ ಪ್ರಕರಣ: 5ನೇ ದಿನದ ಶೋಧ ಕಾರ್ಯಾಚರಣೆ ಆರಂಭ

ಧರ್ಮಸ್ಥಳ ಪ್ರಕರಣ: 5ನೇ ದಿನದ ಶೋಧ ಕಾರ್ಯಾಚರಣೆ ಆರಂಭ

ಮಂಗಳೂರು(ದಕ್ಷಿಣ ಕನ್ನಡ): ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧ ಪ್ರಕರಣ ಸಂಬಂಧ, ಐದನೇ ದಿನಕ್ಕೂ ಶೋಧ ಕಾರ್ಯಾಚರಣೆ ಮುಂದುವರೆದಿದೆ. ವಿಶೇಷ ತನಿಖಾ ತಂಡ (ಎಸ್ಐಟಿ) ರಾಷ್ಟ್ರೀಯ ಹೆದ್ದಾರಿಯ ಬದಿಯ ಅರಣ್ಯ ಪ್ರದೇಶದಲ್ಲಿರುವ ಒಂಭತ್ತನೇ ಜಾಗದಲ್ಲಿ ಉತ್ಖನನ ಪ್ರಕ್ರಿಯೆ ಆರಂಭಿಸಿದೆ.

ದೂರುದಾರನು ತೋರಿಸಿದ್ದ 13 ಜಾಗಗಳಲ್ಲಿ ಇದುವರೆಗೆ ಎಸ್ಐಟಿ ಎಂಟು ಕಡೆ ಶೋಧ ನಡೆಸಿದ್ದು, ಆರನೇ ಜಾಗದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಉಳಿದ ಐದು ಕಡೆಗಳಲ್ಲಿ ಯಾವುದೇ ಮೃತದೇಹದ ಗುರುತು ಸಿಕ್ಕಿಲ್ಲ.

ಈಗ 9ನೇ ಜಾಗವನ್ನು ಅಗೆಯಲಾಗುತ್ತಿದೆ. ಇಲ್ಲಿ ಜನತೆ ನೋಡದಂತೆ ಪರದೆ ವ್ಯವಸ್ಥೆ ಮಾಡಲಾಗಿದೆ. ದೂರುದಾರ ತೋರಿಸಿರುವ 9, 10 ಮತ್ತು 11ನೇ ಸ್ಥಳಗಳು ರಾಷ್ಟ್ರೀಯ ಹೆದ್ದಾರಿಯ ಪಕ್ಕದ ರಸ್ತೆ ಬದಿಯಲ್ಲಿವೆ. ಜುಲೈ 29ರಿಂದ ಶೋಧ ಕಾರ್ಯಾಚರಣೆ ಆರಂಭವಾಗಿದ್ದು, ನೇತ್ರಾವತಿ ನದಿಯ ಬಳಿಯಲ್ಲಿಯೂ ಶೋಧ ನಡೆಯುತ್ತಿದೆ.

‘ಅಲ್ಲಿ ಮೃತದೇಹಗಳನ್ನು ಹೂತಿದ್ದೆ’ ಎಂಬ ದೂರಿನೊಂದಿಗೆ ದೂರುದಾರ ಎಸ್ಐಟಿಗೆ ಮಾಹಿತಿ ನೀಡಿದ್ದನು. ಶೋಧ ಕಾರ್ಯಾಚರಣೆ ಇನ್ನೂ ಕೆಲವು ದಿನಗಳು ಮುಂದುವರಿಯುವ ಸಾಧ್ಯತೆ ಇದೆ.

RELATED ARTICLES
- Advertisment -
Google search engine

Most Popular