ಬೆಂಗಳೂರು: ಕೆ.ಆರ್.ನಗರದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ) ಜಗದೀಶ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಪ್ರಜ್ವಲ್ ವಿರುದ್ಧ ಹಲವು ಅತ್ಯಾಚಾರ ಪ್ರಕರಣಗಳಿವೆ ಎಂಬುದರ ಜೊತೆಗೆ, ಅವನು ಅನೇಕ ಮಹಿಳೆಯರ ವಿಡಿಯೋ ಚಿತ್ರೀಕರಿಸಿದ್ದಾನೆ. ದೂರುದಾರಳನ್ನು ಕಿಡ್ನಾಪ್ ಮಾಡಿ ಹೇಳಿಕೆ ಪಡೆಯಲಾಗಿದೆ ಮತ್ತು ಸಾಕ್ಷ್ಯ ನಾಶಗೊಳಿಸಲು ಯತ್ನಿಸಲಾಗಿದೆ.
ಇವನೆಲ್ಲಾ ಗಂಭೀರ ಅಪರಾಧವಾಗಿದ್ದು, ತೀವ್ರ ಶಿಕ್ಷೆ ಮೂಲಕ ಸಮಾಜಕ್ಕೆ ಗಂಭೀರ ಸಂದೇಶ ನೀಡಬೇಕೆಂದು ಎಸ್‌ಪಿಪಿ ವಾದಿಸಿದರು.
ಪ್ರಜ್ವಲ್ ತನಗಿರುವ ರಾಜಕೀಯ ಹಾಗೂ ಸಾಂಸ್ದೀಯ ಸ್ಥಾನವನ್ನು ದುರುಪಯೋಗ ಮಾಡಿಕೊಂಡಿದ್ದು, ಪಶ್ಚಾತಾಪವೂ ತೋರಿಸಿಲ್ಲ. ಹಣ, ಅಧಿಕಾರ ಇರುವ ವ್ಯಕ್ತಿಗೆ ಕಡಿಮೆ ಶಿಕ್ಷೆ ನೀಡಿದರೆ ಇದು ಅಪಾಯಕಾರಿ ಸಂದೇಶ ನೀಡಬಹುದು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಶಿಕ್ಷೆಯ ಪ್ರಮಾಣ ಇಂದು ಪ್ರಕಟವಾಗಲಿದೆ.