Monday, August 4, 2025
Google search engine

Homeಸ್ಥಳೀಯದಸರಾ ಗಜಪಯಣಕ್ಕೆ ಕ್ಷಣಗಣನೆ: ಮೈಸೂರಿಗೆ ಆನೆಗಳ ಪಯಣಕ್ಕೆ ಸಿದ್ಧತೆ ಪೂರ್ಣ

ದಸರಾ ಗಜಪಯಣಕ್ಕೆ ಕ್ಷಣಗಣನೆ: ಮೈಸೂರಿಗೆ ಆನೆಗಳ ಪಯಣಕ್ಕೆ ಸಿದ್ಧತೆ ಪೂರ್ಣ

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ  ಆಗಮಿಸುವ ಗಜಪಡೆಯನ್ನು ಸ್ವಾಗತಿಸುವ ಗಜಪಯಣಕ್ಕೆ ಕ್ಷಣಗಣನೆ ಆರಂಭವಾಗಿದೆ.

ಇಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲು ವೀರನಹೊಸಳ್ಳಿಯ ಬಳಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಮೊದಲ ಹಂತದ ಗಜಪಯಣಕ್ಕೆ ಚಾಲನೆ  ಸಿಗಲಿದೆ.  ಮಧ್ಯಾಹ್ನ 12.34 ಯಿಂದ 12.54ರ ತನಕ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ನೇತೃತ್ವದಲ್ಲಿ ಪೂಜೆ ಸಲ್ಲಿಕೆಯಾಗಲಿದೆ.

ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಮೊದಲ ಹಂತದಲ್ಲಿ ಅಭಿಮನ್ಯು, ಭೀಮ, ಕಂಜನ್, ಪ್ರಶಾಂತ್, ಮಹೇಂದ್ರ, ಏಕಲವ್ಯ, ಧನಂಜಯ್, ಕಾವೇರಿ, ಲಕ್ಷ್ಮೀ ಆನೆಗಳು ಮೈಸೂರಿಗೆ ಆಗಮಿಸಲಿವೆ. ವೀರನಹೊಸಹಳ್ಳಿಯಿಂದ ಮೈಸೂರಿನ ಅರಣ್ಯ ಭವನಕ್ಕೆ ಬರಲಿರುವ ಗಜಪಡೆ ಬಳಿಕ 2 ದಿನಗಳ ವಿಶ್ರಾಂತಿ ಪಡೆಯಲಿದ್ದು ನಂತರ ಆಗಸ್ಟ್ 7 ರಂದು ಅರಮನೆ ಆವರಣಕ್ಕೆ ಆಗಮಿಸಲಿವೆ. ಈ ಬಾರಿಯೂ ಕ್ಯಾಪ್ಟನ್ ಅಭಿಮನ್ಯು  ಜಂಬೂ ಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊರಲಿದ್ದಾನೆ.

RELATED ARTICLES
- Advertisment -
Google search engine

Most Popular