ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಪುರಸಭಾ ವ್ಯಾಪ್ತಿಯ ರಾಜ್ಯ ಹೆದ್ದಾರಿ ಮೂಡುಬಿದಿರೆ- ಧರ್ಮಸ್ಥಳಕ್ಕೆ ಹಾದು ಹೋಗುವ ಮಾರೂರು ಬಳಿಯ ಮಧ್ಯ ರಸ್ತೆಯಲ್ಲಿ ಹೊಂಡವೊಂದು ಸೃಷ್ಟಿಯಾಗಿದ್ದು ಇದಕ್ಕೆ ಸ್ಥಳೀಯರು ಬಾಳೆ ಗಿಡಗಳನ್ನು ನೆಟ್ಟು ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಯ ಪ್ರಭಾವದಿಂದಾಗಿ ತಮ್ಮ ವ್ಯಾಪ್ತಿಯ ಹೆಚ್ಚಿನ ರಸ್ತೆಗಳು ಹೊಂಡಗಳಿಂದ ತುಂಬಿಕೊಂಡಿದ್ದು ಸೂಕ್ತ ವ್ಯವಸ್ಥೆಯನ್ನು ಆದಷ್ಟು ಬೇಗ ಕಲ್ಪಿಸಿ ವಾಹನ ಅಪಘಾತಗಳಿಂದ ಪ್ರಾಣಾಪಾಯವಾಗುವುದನ್ನು ತಪ್ಪಿಸಿ ಎಂಬ ಸಂದೇಶವನ್ನು ಜನಪ್ರತಿನಿಧಿಗಳಿಗೆ ನೀಡಿದಂತಿದೆ.