Saturday, April 19, 2025
Google search engine

Homeಅಪರಾಧಹಾಡಹಗಲೇ ವೃದ್ಧೆಯ ಸರ ಕದ್ದು ಪರಾರಿಯಾದ ಕಳ್ಳ

ಹಾಡಹಗಲೇ ವೃದ್ಧೆಯ ಸರ ಕದ್ದು ಪರಾರಿಯಾದ ಕಳ್ಳ

ಚಳ್ಳಕೆರೆ: ನಗರದ ಗಾಂಧಿನಗರದ ಯಲ್ಲಮ್ಮನ ಗುಡಿ ಬಳಿ ಹಾಡು ಹಗಲೇ ಕಳ್ಳನು ತನ್ನ ಕೈಚಳಕ ತೋರಿಸಿ ಲಕ್ಷ್ಮಿದೇವಿ (70)ಎಂಬ ವೃದ್ದೆಯ ಸರ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.

ಮಹಿಳೆಯು ಯಲ್ಲಮ್ಮನ ಗುಡಿಗೆ ತೆರಳಿ ಪೂಜೆ ಸಲ್ಲಿಸಿ ಅಲ್ಲಿಯೇ ಇದ್ದ ಪಕ್ಕದ ಮನೆಯವರ ಬಳಿ ಮಾತನಾಡುತ್ತಾ ಕುಳಿತಿರುವಾಗ ಮಧ್ಯಾಹ್ನ12ರ ಸುಮಾರಿಗೆ ಮುಸುಕುದಾರಿ ವ್ಯಕ್ತಿಯೊಬ್ಬ ಬಂದು ಸರ ಕಿತ್ತು ಪರಾರಿಯಾಗಿದ್ದಾನೆ‌.

ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ .

ಘಟನೆ ನಡೆದ ಸ್ಥಳಕ್ಕೆ ಗಾಂಧಿನಗರದ ನಗರಸಭೆ ಸದಸ್ಯ ಹೊಯ್ಸಳ ಗೋವಿಂದ ಬಂದು ಘಟನೆಯ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ಇದರ ಬಗ್ಗೆ ಹೆಚ್ಚಿನ ನಿಗ ವಹಿಸಬೇಕು ಮಹಿಳೆಯರು ಸಹ ಬಂಗಾರದ ಆಭರಣಗಳನ್ನು ಹಾಕಿಕೊಂಡಾಗ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.

RELATED ARTICLES
- Advertisment -
Google search engine

Most Popular