ಮಂಗಳೂರು (ದಕ್ಷಿಣ ಕನ್ನಡ): ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದಲ್ಲಿ ಇಂದು ನಿರ್ಣಾಯಕ ತಿರುವು. 13ನೇ ಸ್ಪಾಟ್‌ನಲ್ಲಿ ಎಸ್‌ಐಟಿ ಬೆಳಿಗ್ಗೆ 11.30ರ ಸುಮಾರಿಗೆ ಶೋಧ ಆರಂಭಿಸಲಿದೆ. ದೂರುದಾರನು ಒಟ್ಟು 13 ಸ್ಥಳಗಳನ್ನು ಗುರುತಿಸಿದ್ದಾನೆ. ಕೇವಲ ಎರಡು ಕಡೆಗಳಲ್ಲಿ ಮಾತ್ರ ಅವಶೇಷಗಳು ಪತ್ತೆಯಾಗಿವೆ.
ಇಂದಿನ ಸ್ಥಳದಿಂದ ಇನ್ನಷ್ಟು ಅವಶೇಷಗಳು ದೊರಕಬಹುದೆಂಬ ನಿರೀಕ್ಷೆ ಇದೆ. ಧರ್ಮಸ್ಥಳದ ಸುತ್ತಲಿನ ಈ ಕೊನೆಯ ಸ್ಪಾಟ್ ನಲ್ಲಿ ಮಹತ್ವದ ಸುಳಿವು ಸಿಗಬಹುದೆಂಬ ಅನುಮಾನ ಹೆಚ್ಚಾಗಿದೆ. ತನಿಖೆ ನಿರ್ಣಾಯಕ ಹಂತದಲ್ಲಿ ಸಾಗುತ್ತಿದೆ.