ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಗ್ರಾಮ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಸುಧಾ ಶಂಕರಪ್ಪ ಬುಧವಾರ ರಂದು ಅಧಿಕಾರ ಸ್ವೀಕಾರ ಮಾಡಿದರು. ಹಾಲಿ ಅಧ್ಯಕ್ಷರಾಗಿದ್ದ ಸೋಮನಹಳ್ಳಿ ಜಗದೀಶ್ ಅವರ ರಾಜಿನಾಮೆ ಯಿಂದ ಇವರು ಮುಂದಿನ ಅಧ್ಯಕ್ಷರ ಆಯ್ಕೆವರಿಗೂ ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ,ಪಂ ಸದಸ್ಯರಾದ ರತ್ನ ಜಯಣ್ಣ, ಮಂಗಳಾ ರಮೇಶ್, ಸುಧಾರಾಣಿ ಮಹಾದೇವ್, ದೇವೇಂದ್ರ, ಪುನೀತ್, ಪಾಪಣ್ಣ, ಮಾದೇಗೌಡ, ನಟರಾಜ್, ಸೊಸೈಟಿ ಮಾಜಿ ಅಧ್ಯಕ್ಷ ವೆಂಕಟೇಶ್, ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಕೃಷ್ಣ, ಮಾಜಿ ತಾ,ಪಂ, ಸದಸ್ಯರಾದ ಚಿಕ್ಕೆ ಗೌಡ, ಮುಖಂಡರಾದ ರಾಮಯ್ಯ,ಶೇಖರೇಗೌಡ, ನಟ, ದೇವರಾಜ್,ಗೋವಿಂದು, ಕೃಷ್ಣಯ್ಯ ಪಿಡಿಓ ರಾಜೇಶ್, ಕಾರ್ಯದರ್ಶಿ ಎಸ್.ಅರ್. ಅಶ್ವಿನಿ ಇದ್ದರು.