Thursday, August 7, 2025
Google search engine

Homeವಿದೇಶಭಾರತದ ಮೇಲೆ ಹೆಚ್ಚುವರಿ 25% ವ್ಯಾಪಾರ ಸುಂಕ ವಿಧಿಸಿದ ಟ್ರಂಪ್

ಭಾರತದ ಮೇಲೆ ಹೆಚ್ಚುವರಿ 25% ವ್ಯಾಪಾರ ಸುಂಕ ವಿಧಿಸಿದ ಟ್ರಂಪ್

ವಾಷಿಂಗ್ಟನ್: ರಷ್ಯಾದಿಂದ ನಿರಂತರವಾಗಿ ತೈಲ ಖರೀದಿಸುತ್ತಿರುವ ಕಾರಣವನ್ನು ಉಲ್ಲೇಖಿಸಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಹೆಚ್ಚುವರಿಯಾಗಿ 25% ವ್ಯಾಪಾರ ಸುಂಕವನ್ನು ವಿಧಿಸಿದ್ದಾರೆ. ಈ ಮೂಲಕ ಭಾರತದಿಂದ ಆಗುವ ಆಮದುಗಳ ಮೇಲಿನ ಒಟ್ಟು ಸುಂಕ ಶೇಕಡಾ 50ಕ್ಕೆ ಏರಿಕೆಯಾಗಿದೆ.

ಬುಧವಾರ ಈ ಕುರಿತು ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ಟ್ರಂಪ್, ಸುಂಕ ಜಾರಿಗೆ ಬರುವ ದಿನಾಂಕವನ್ನು ಆಗಸ್ಟ್ 27, 2025 ಎಂದು ಘೋಷಿಸಿದ್ದಾರೆ. ರಷ್ಯಾದಿಂದ ತೈಲ ಆಮದು ಮುಂದುವರಿಸಿದರೆ 24 ಗಂಟೆಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ದಿನದೊಳಗೆ ಈ ನಿರ್ಧಾರ ಹೊರಬಿದ್ದಿದೆ.

ಆದೇಶದಲ್ಲಿ ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾವನ್ನು ಆರ್ಥಿಕವಾಗಿ ಒತ್ತಡಕ್ಕೆ ಒಳಪಡಿಸಲು ತೈಲ ಆಮದಿಗೆ ನಿರ್ಬಂಧ ವಿಧಿಸುವುದಾಗಿ ತಿಳಿಸಲಾಗಿದೆ. “ಭಾರತವು ನೇರ ಅಥವಾ ಪರೋಕ್ಷವಾಗಿ ರಷ್ಯಾ ತೈಲವನ್ನು ಆಮದು ಮಾಡುತ್ತಿದೆ. ಆದ್ದರಿಂದ ಈ ಹೆಚ್ಚುವರಿ ಸುಂಕ ಅನಿವಾರ್ಯ,” ಎಂದು ಟ್ರಂಪ್ ಹೇಳಿದ್ದಾರೆ.

ಸುಂಕ ಜಾರಿಗೆ ಮುನ್ನ ಸಾಗಾಟದಲ್ಲಿರುವ ಸರಕುಗಳಿಗೆ ವಿನಾಯಿತಿ ದೊರೆಯಲಿದೆ. ಪ್ರತೀಕಾರ ಕೈಗೊಂಡರೆ, ಈ ಕ್ರಮವನ್ನು ಇನ್ನಷ್ಟು ಕಠಿಣಗೊಳಿಸುವ ಎಚ್ಚರಿಕೆಯನ್ನು ಟ್ರಂಪ್ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular