Monday, August 11, 2025
Google search engine

Homeರಾಜ್ಯನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ

ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ

ಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಕಾರ್ಯಕ್ರಮದ ಆರಂಭದಲ್ಲಿ ಅವರು KSR ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ನಂತರ, ಅವರು ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿ ಹಳದಿ ಮಾರ್ಗವನ್ನು ಉದ್ಘಾಟಿಸಿದರು.

ಪ್ರಧಾನಿ ಮೋದಿ ಮೊದಲ ಬಾರಿಗೆ ರಾಜ್ಯಕ್ಕೆ ಬಂದಿರುವುದು ಎರಡು ಮಹತ್ವದ ಯೋಜನೆಗಳನ್ನು ಉದ್ಘಾಟಿಸಲು. ಮೊದಲನೆಯದು, ಬೆಂಗಳೂರು–ಬೆಳಗಾವಿ ನಡುವೆ ಹೊಸ ವಂದೇ ಭಾರತ್ ರೈಲು ಸೇವೆಯ ಪ್ರಾರಂಭ. ಎರಡನೆಯದು, ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಯ ಜೊತೆಗೆ ಮೂರನೇ ಹಂತದ ಶಂಕುಸ್ಥಾಪನೆ.

ಈ ಯೋಜನೆಯ ಶಂಕುಸ್ಥಾಪನೆ 2016ರ ಜೂನ್ 14ರಂದು ನರೇಂದ್ರ ಮೋದಿಯವರಿಂದಲೇ ನಡೆದಿತ್ತು. ಈಗ, ಸುಮಾರು 8 ವರ್ಷಗಳ ನಂತರ ಅವರು ಸ್ವತಃ ಲೋಕಾರ್ಪಣೆ ಮಾಡಿದ್ದಾರೆ. ಹಳದಿ ಮಾರ್ಗದಲ್ಲಿ 16 ನಿಲ್ದಾಣಗಳಿದ್ದು, ಒಟ್ಟು ಉದ್ದ 19.15 ಕಿಲೋಮೀಟರ್. ಪ್ರಾರಂಭದಲ್ಲಿ ಮೂರು ರೈಲುಗಳ ಸಂಚಾರ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ನಾಲ್ಕನೇ ರೈಲು ಕೂಡ ಸೇರಲಿದೆ.

ಪ್ರತಿ 20–25 ನಿಮಿಷಗಳಿಗೊಂದು ರೈಲು ಸಂಚರಿಸುವ ಸಾಧ್ಯತೆ ಇದ್ದು, ಪ್ರತಿ ದಿನ 25,000–30,000 ಜನ ಪ್ರಯಾಣಿಸುವ ನಿರೀಕ್ಷೆ ಇದೆ. ರೈಲುಗಳ ಸಂಖ್ಯೆ ಹೆಚ್ಚಾದರೆ 8 ಲಕ್ಷ ಪ್ರಯಾಣಿಕರು ಪ್ರತಿದಿನ ಪ್ರಯಾಣಿಸಬಹುದೆಂದು ಅಂದಾಜಿಸಲಾಗಿದೆ.

ಇನ್ನೂ, ಹಳದಿ ಮಾರ್ಗಕ್ಕೆ ಒಟ್ಟು 7,616 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಮೆಟ್ರೋದ ಹಳದಿ ಮಾರ್ಗದಲ್ಲಿ 16 ನಿಲ್ದಾಣಗಳು ಇದ್ದು 19.15 ಕಿಲೋ ಮೀಟರ್ ಉದ್ದವಿದೆ. ಆರ್.ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಮೂರು ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ. ಅದರಂತೆ ತಿಂಗಳ ಕೊನೆಯಲ್ಲಿ 4ನೇ ಮೆಟ್ರೋ ಈ ಮಾರ್ಗಕ್ಕೆ ಸೇರಲಿದೆ.

ಯಲ್ಲೋ ಮಾರ್ಗ ಮೆಟ್ರೋದ ಪ್ರಯಾಣ ದರ
ಆರ್ ವಿ ರಸ್ತೆ ರಾಗಿಗುಡ್ಡ ₹10
ಆರ್ ವಿ ರಸ್ತೆ ಜಯದೇವ ₹10
ಆರ್ ವಿ ರಸ್ತೆ BTM ಲೇಔಟ್ ₹20
ಆರ್ ವಿ ರಸ್ತೆ ಬೊಮ್ಮನಹಳ್ಳಿ ₹30
ಆರ್ ವಿ ರಸ್ತೆ ಕೂಡ್ಲೂಗೇಟ್ ₹40
ಆರ್ ವಿ ರಸ್ತೆ ಸಿಂಗಸಂದ್ರ ₹50
ಆರ್ ವಿ ರಸ್ತೆ ಎಲೆಕ್ಟ್ರಾನಿಕ್ ಸಿಟಿ ₹60
ಆರ್ ವಿ ರಸ್ತೆ ಬೊಮ್ಮಸಂದ್ರ ₹60
ಸಿಲ್ಕ್ ಬೋರ್ಡ್ ಬೊಮ್ಮಸಂದ್ರ ₹60

RELATED ARTICLES
- Advertisment -
Google search engine

Most Popular