Thursday, August 14, 2025
Google search engine

Homeರಾಜ್ಯಸುದ್ದಿಜಾಲಮಂಗಳಮುಖಿಯರೊಂದಿಗೆ ರಕ್ಷಾಬಂಧನ ಆಚರಿಸಿದ ಜನಧ್ವನಿ ಫೌಂಡೇಶನ್

ಮಂಗಳಮುಖಿಯರೊಂದಿಗೆ ರಕ್ಷಾಬಂಧನ ಆಚರಿಸಿದ ಜನಧ್ವನಿ ಫೌಂಡೇಶನ್

ಹುಣಸೂರು: ಜನಧ್ವನಿ ಫೌಂಡೇಶನ್ ಸದಸ್ಯರು ತೃತಿಯ ಲಿಂಗಿಗಳೊಡನೆ ರಾಖಿ ಕಟ್ಟಿಸಿಕೊಂಡು ರಕ್ಷಾಬಂಧನ ಆಚರಣೆ ಮಾಡಿದರು. ಹುಣಸೂರಿನಲ್ಲಿ ಮಂಗಳಮುಖಿಯರ ಮನೆಗೆ ತೆರಳಿ ಯೋಗ ಕ್ಷೇಮ ವಿಚಾರಿಸಿ ನಂತರ ಅವರಿಂದ ರಾಖಿ ಕಟ್ಟಿಸಿಕೊಂಡು ಸಿಹಿ ತಿನ್ನಿಸಿ ರಕ್ಷ ಬಂಧನಕ್ಕೆ ಶುಭಾಷಯ ಕೋರುವ ಮೂಲಕ ಒಂದು ವಿನೂತನ ಹಾಗೂ ಮಾನವೀಯ ಕಾರ್ಯಕ್ಕೆ ಜನಧ್ವನಿ ಫೌಂಡೇಶನ್ ಮುಂದಾಗಿದೆ.

ಇದೆ ವೇಳೆ ಮಾತನಾಡಿದ ಫೌಂಡೇಶನ್ ಅಧ್ಯಕ್ಷ,ವಕೀಲ ಆಯರಹಳ್ಳಿ ಪ್ರವೀಣ್ ಅಣ್ಣ-ತಂಗಿಯರ ಪವಿತ್ರ ಸಂಬಂಧವನ್ನು ಬೆಸೆದು ಇನಷ್ಟು ಗಟ್ಟಿ ಮಾಡುವ ಹಬ್ಬವೆ ರಕ್ಷಾ ಬಂಧನ ಈ ಹಬ್ಬವನ್ನು ಪ್ರತಿವರ್ಷದಂತೆ ಈ ವರ್ಷವೂ ಕೂಡ ಈ ವರ್ಷವೂ ನಮಗೆ ರಾಖಿ ಕಟ್ಟಿ ಸಂಭ್ರಮಿಸುತ್ತಿದ್ದಾರೆ ಎಂದರು.

ಅವರಿಗೂ ಅಣ್ಣ ತಮ್ಮಂದಿರು ಇದ್ದು ಯಾರು ಇಲ್ಲದಂತೆ ಜೀವನ ನಡೆಸುತ್ತಿದ್ದಾರೆ.ಅವರ ಮನಸ್ಸಿನ ಭಾವನೆಗಳನ್ನು ಅರಿತುಕೊಂಡು ಈ ಸಮಾಜ ಆವರನ್ನು ಗೌರವದಿಂದ ಕಾಣಬೇಕು ಸ್ವ ಉದ್ಯೋಗ ಕಲ್ವಿಸುವ ನಿಟ್ಟಿನಲ್ಲಿ ಈ ಸಮುದಾಯಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆ ಅಗತ್ಯವಿದೆ, ಎಂದರು.

ಇವರು ಸ್ವಾವಲಂಬಿ ಜೀವನ ನಡೆಸಲು ಸ್ತ್ರೀ ಶಕ್ತಿ ಮಾದರಿಯಲ್ಲಿ ಸ್ವಸಹಾಯ ಸಂಘ ರಚಸಿ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ನೆರವಾಗಬೇಕು ಎಂದು ತಿಳಿಸಿದರು.

ಮಂಗಳಮುಖಿ ಹೇಮಾ ಮಾತನಾಡಿ , ಎಲ್ಲರೂ ಇದ್ದು ಯಾರು ಇಲ್ಲದಂತೆ ಬದುಕುತ್ತಿರುವ ನಮ್ಮ ಭಾವನೆ ಸ್ಪಂದಿಸಿ ಜನಧ್ವನಿ ಫೌಂಡೇಶನ್ ತಂಡ ಪ್ರತಿ ವರ್ಷ ನಮ್ಮೊಡನೆ ರಕ್ಷ ಬಂಧನ ಆಚರಣೆ ಮಾಡುತ್ತಿರುವುದಲ್ಲದೆ ಕೊರೋನಾ ಸಂದರ್ಭದಲ್ಲಿ ನಮ್ಮ ಜೀವನ ಅಸ್ತವ್ಯಸ್ತ ವಾದಾಗ ನಮಗೆ ಪಡಿತರವನ್ನು ವಿತರಿಸುವುದರ ಜೊತೆಗೆ ಗೌರಿ-ಗಣೇಶ ಹಬ್ಬದಲ್ಲೂ ಸಹ ಭಾಗಿನ ನೀಡುವ ಮೂಲಕ ಅಣ್ಣ ತಮ್ಮದಿಂರ ರೀತಿ ನಮ್ಮ ಕಷ್ಟ ಸುಖಗಳಲ್ಲಿ ಹೆಗಲು ಕೊಟ್ಟು ನಿಂತಿರುವುದು ಖುಷಿಯ ವಿಚಾರ ಎಂದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಸುನೀಲ್ , ಗೌರವಾಧ್ಯಕ್ಷರಾದ ಕಲ್ಕುಣಿಕೆ ಭಾಸ್ಕರ್ , ಮಂಗಳಮುಖಿಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular