ಮಂಗಳೂರು (ದಕ್ಷಿಣ ಕನ್ನಡ): ಧರ್ಮಸ್ಥಳ ಸಮೀಪ ಮೂವರು ಯೂಟ್ಯೂಬರ್‌ಗಳು ಬೈಕ್ ಸವಾರನೊಬ್ಬನಿಗೆ ಹಲ್ಲೆ ನಡೆಸಿದ ಆರೋಪ ಎದುರಾಗಿದೆ. ಆಗಸ್ಟ್ 6 ರಂದು ಧರ್ಮಸ್ಥಳದ ಪಾಂಗಳ ಕ್ರಾಸ್ ಬಳಿ ಈ ಘಟನೆ ಸಂಭವಿಸಿದೆ. ಹರೀಶ್ ನಾಯ್ಕ ಎಂಬವರು ನೀಡಿದ ದೂರು ಪ್ರಕಾರ, ತಾನು ಬೈಕ್ ನಲ್ಲಿ ಸಾಗುತ್ತಿದ್ದಾಗ ‘ಕುಡ್ಲ ರಾಂಪೇಜ್’ ಎಂದು ಗುರುತಿಸಿಕೊಂಡ ಯೂಟ್ಯೂಬರ್‌ಗಳು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದ್ದಾರೆ.
ಅವರು “ಇಲ್ಲಿ ಹೆಣಗಳನ್ನು ಹೂತು ಹಾಕಿದ್ದೀರಾ?” ಎಂದು ಪ್ರಶ್ನಿಸಿ, ಉತ್ತರ ನೀಡದಿದ್ದ ಹಿನ್ನೆಲೆಯಲ್ಲಿ ಹೆಸರನ್ನು ಕೇಳಿ ಬೈದು ಹಲ್ಲೆ ನಡೆಸಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕಲಂ 126(2), 115(2), 352 ಮತ್ತು 3(5) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.