Monday, August 11, 2025
Google search engine

Homeರಾಜ್ಯಸುದ್ದಿಜಾಲಧರ್ಮಸ್ಥಳ ಪ್ರಕರಣ: ಎಸ್‌ಐಟಿ ತನಿಖೆ ಚುರುಕು, ಜಿ.ಪಿ.ಆರ್ ಯಂತ್ರದ ಮೂಲಕ 13ನೇ ಸ್ಥಳದಲ್ಲಿ ಪರಿಶೀಲನೆ ಆರಂಭ

ಧರ್ಮಸ್ಥಳ ಪ್ರಕರಣ: ಎಸ್‌ಐಟಿ ತನಿಖೆ ಚುರುಕು, ಜಿ.ಪಿ.ಆರ್ ಯಂತ್ರದ ಮೂಲಕ 13ನೇ ಸ್ಥಳದಲ್ಲಿ ಪರಿಶೀಲನೆ ಆರಂಭ

ಮಂಗಳೂರು (ದಕ್ಷಿಣ ಕನ್ನಡ): ಧರ್ಮಸ್ಥಳ ಗ್ರಾಮದ ವಿವಿದೆಡೆ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಆರೋಪದ ಕುರಿತು ಇಂದು ಕೂಡಾ ಎಸ್ ಐಟಿ ತನಿಖೆ ಚುರುಕುಗೊಂಡಿದೆ. ಈ ಪ್ರಕರಣದ ತನಿಖೆಯಲ್ಲಿ ಅತ್ಯಂತ ಮಹತ್ವದ ಬೆಳವಣಿಗೆ ನಡೆದಿದ್ದು, ಜಿ.ಪಿ.ಆರ್ ಯಂತ್ರವನ್ನು ಉಪಯೋಗಿಸಿ ಎಸ್‌ಐಟಿ ತನಿಖೆ ಆರಂಭಿಸಿದೆ.

ಇಂದು ಎಸ್.ಐ.ಟಿ ತಂಡ ಹಾಗೂ ಜಿ.ಪಿ.ಆರ್ ತಜ್ಞರ ತಂಡ ಸಾಕ್ಷಿ ದೂರುದಾರ ಗುರುತಿಸಿದ 13ನೆಯ ಸ್ಥಳದಲ್ಲಿ ಜಿ.ಪಿ. ಆರ್ ನಿಂದ ಪರಿಶೀಲನೆಗೆ ಸಿದ್ದತೆಗಳು ನಡೆದಿದ್ದು, ಜಿ.ಪಿ.ಆರ್ ಯಂತ್ರವನ್ನು ನೇತ್ರಾವತಿ ಸ್ನಾನಘಟ್ಟದ ಸಮೀಪ ಗುರುತಿಸಿದ 13ನೆಯ ಸ್ಥಳಕ್ಕೆ ತರಲಾಗಿದ್ದು ಕಾರ್ಯಾಚರಣೆ ಆರಂಭಿಸಿದ್ದಾರೆ.

RELATED ARTICLES
- Advertisment -
Google search engine

Most Popular