Tuesday, August 12, 2025
Google search engine

Homeರಾಜ್ಯಸುದ್ದಿಜಾಲಚಾಮರಾಜನಗರ: ಖುದಿರಾಮ್ ಬೋಸ್ ಬಲಿದಾನ ದಿನಾಚರಣೆ – ಜೈ ಹಿಂದ್ ಪ್ರತಿಷ್ಠಾನದಿಂದ ಗೌರವ ನಮನ

ಚಾಮರಾಜನಗರ: ಖುದಿರಾಮ್ ಬೋಸ್ ಬಲಿದಾನ ದಿನಾಚರಣೆ – ಜೈ ಹಿಂದ್ ಪ್ರತಿಷ್ಠಾನದಿಂದ ಗೌರವ ನಮನ

ಚಾಮರಾಜನಗರ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮ ಹೋರಾಟದ ಮೂಲಕ ತ್ಯಾಗ ಬಲಿದಾನಗೈದ ಲಕ್ಷಾಂತರ ಕ್ರಾಂತಿಕಾರರು ಹಾಗೂ ಸ್ವಾತಂತ್ರ ಪ್ರೇಮಿಗಳಿಗೆ ನಗರದ ಜೈ ಹಿಂದ್ ಕಟ್ಟೆಯಲ್ಲಿ ಶ್ರೀ ಖುದಿರಾಮ್ ಬೋಸ್ ರವರ ಬಲಿದಾನ ದಿವಸ ದಿನದಂದು ಗೌರವ ನಮನ ಸಲ್ಲಿಸಿ ಆತ್ಮಕ್ಕೆ ಶಾಂತಿ ಕೋರಲಾಯಿತು.

ಖುದಿರಾಮ್ ಬೋಸ್ ರವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿ ಮಾತನಾಡಿದ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಭಾರತದ ಸ್ವಾತಂತ್ರ್ಯ ಹೋರಾಟದ ಸಾವಿರಾರು ಯುವಕರಿಗೆ ಆದರ್ಶ ಪ್ರಾಯರಾದವರು ಖುದಿರಾಮ್ ಬೋಸ್. ಕೇವಲ 18 ವರ್ಷದಲ್ಲೇ ತಮ್ಮ ಜೀವನವನ್ನು ಭಾರತದ ಸ್ವಾತಂತ್ರ್ಯ ಚಳುವಳಿಗೆ ಅರ್ಪಿಸಿ ಮರಣದಂಡನೆಗೆ ಒಳಗಾಗಿ ಬಲಿದಾನ ಗೈದ ಖುದಿರಾಮ್ ಬೋಸ್ ರವರು ಕೋಟ್ಯಾಂತರ ಸ್ವಾತಂತ್ರ ಹೋರಾಟಗಾರರಿಗೆ ಹಾಗೂ ದೇಶಭಕ್ತರಿಗೆ ಆದರ್ಶವಾಗಿದ್ದಾರೆ.

ಬಾಲ್ಯದಿಂದಲೂ ದೇಶಭಕ್ತರಾಗಿದ್ದ ಖುದಿ ರಾಮ್ ಬೋಸ್ ಭಾರತೀಯರ ಆದರ್ಶ ಯುವ ಕ್ರಾಂತಿಕಾರಿ. ಅಪ್ಪಟ ದೇಶಭಕ್ತರಾದ ಶ್ರೀ ಅರಬಿಂದೋ ಮಹರ್ಷಿ ಹಾಗೂ ಸಹೋದರಿ ನಿವೇದಿತಾ ರವರ ಪ್ರಭಾವಕ್ಕೆ ಒಳಗಾಗಿದ್ದ ಖುದಿರಾಮ್ ಬೋಸ್ ರವರು ತಮ್ಮ ಹದಿನೈದನೇ ವಯಸ್ಸಿನಲ್ಲಿ ಅನುಶೀಲನಾ ಸಮಿತಿಯ ಸದಸ್ಯರಾಗಿ ಕ್ರಾಂತಿಕಾರಿ ಬಾಂಬ್ ತಯಾರಿಕೆಯ ತರಬೇತಿ ಪಡೆದು ಆಫ್ಜಲ್ಪುರದ ಪಿ ತೂರಿಗೆ ಕಾರಣವಾದ ಬ್ರಿಟಿಷ್ ಅಧಿಕಾರಿಯನ್ನು ಕೊಲ್ಲುವ ಪ್ರಕರಣದಲ್ಲಿ ತಾವೇ ಸ್ವತಹ ಬಂಧನಕ್ಕೆ ಒಳಗಾಗಿ ಗಲ್ಲು ಶಿಕ್ಷೆಗೆ ಒಳಗಾದವರು. ಗಲ್ಲು ಶಿಕ್ಷೆಯ ಸಮಯದಲ್ಲೂ ಅತ್ಯಂತ ಶಾಂತ ರೀತಿಯಲ್ಲಿ ಭಾರತಾಂಬೆಗೆ ತಮ್ಮ ಪ್ರಾಣವನ್ನು ಅರ್ಪಿಸಿ ಭಗವದ್ಗೀತೆ ಪಡೆದು ವಂದೇ ಮಾತರಂ ಘೋಷಣೆಯನ್ನು ಭಾರತಕ್ಕೆ ಮಾತೆಗೆ ಅರ್ಪಿಸಿ ಕೊರಳಿಗೆ ನೇಣು ಕುಣಿಕೆಯನ್ನು ತಾವೇ ಹಾಕಿಕೊಂಡು ಪ್ರಾಣ ಅರ್ಪಿಸಿದ ಅಪರೂಪದ ಅಪ್ಪಟ ಕ್ರಾಂತಿಕಾರಿ. ಖುದಿರಾಮ್ ಬೋಸ್ ರವರ ಜೀವನ ಹಾಗೆಯ ಕ್ರಾಂತಿಕಾರಿಗಳ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳು ದೇಶದ ಮನೆ ಮನೆಗಳಲ್ಲೂ ಹೊಸ ರಾಷ್ಟ್ರಭಕ್ತಿಯ ಜ್ವಾಲೆಯಾಗಿ ಹೊರಹೊಮ್ಮಬೇಕು. ನಿರಂತರವಾಗಿ ದೇಶಪ್ರೇಮ ಬೆಳೆಸುವ ಕಾರ್ಯಗಳು ಎಲ್ಲೆಡೆ ನಡೆಯಬೇಕು ಎಂದು ತಿಳಿಸಿದರು.

ಪುಷ್ಪ ವನ್ನು ಅರ್ಪಿಸಿ ಮಾತನಾಡಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿಕೆ ಆರಾಧ್ಯರವರು ಮಾತನಾಡಿ ಸ್ವಾತಂತ್ರ ದೊರತದ್ದು ನೂರಾರು ಹೋರಾಟಗಳ ಮೂಲಕ .ಇತಿಹಾಸದಲ್ಲಿ ಕ್ರಾಂತಿಕಾರಿಗಳ ಜೀವನವೇ ಅತ್ಯಂತ ರೋಮಾಂಚನವಾದದ್ದು. ಕ್ರಾಂತಿಕಾರಿಗಳಾದ ಭಗತ್ ಸಿಂಗ್ ,ರಾಜಗುರು, ಸುಖದೇವ್, ಅಲ್ಫಾ ಖಾನ್, ಮದನ್ ಲಾಲ್ ಧಿಂಗ್ರಾ, ಮುಂತಾದ ಯುವಕರ ದೇಶಪ್ರೇಮದ ಕಥೆಗಳು ನಮಗೆಲ್ಲರಿಗೂ ಮಾದರಿಯಾಗಬೇಕು ಎಂದು ತಿಳಿಸಿದರು.

ಸಮಾಜ ಸೇವಕರಾದ ಸುರೇಶ್ ಗೌಡ ಮಾತನಾಡಿ ಜೈ ಹಿಂದ್ ಕಟ್ಟೆಯಲ್ಲಿ ಸುಮಾರು 2,900ಕ್ಕೂ ಹೆಚ್ಚು ದೇಶಭಕ್ತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು ಬಹಳ ಹೆಮ್ಮೆಯಾಗಿದೆ.
ದೇಶಪ್ರೇಮ, ರಾಷ್ಟ್ರಭಕ್ತಿ ರಾಷ್ಟ್ರೀಯ ಚಿಂತನೆ ,ರಾಷ್ಟ್ರ ನಿಷ್ಠೆಯ ಅಮೂಲ್ಯ ಕಾರ್ಯಕ್ರಮಗಳು ಹಾಗೂ ಅಗೋಚರವಾದ ನೂರಾರು ಕ್ರಾಂತಿಕಾರಿಗಳು ಸ್ವಾತಂತ್ರ ಹೋರಾಟಗಾರರ ಜೀವನ ಚರಿತ್ರೆಯನ್ನು ತಿಳಿಸುವ ನಿತ್ಯ ನಿರಂತರ ಕಾರ್ಯಕ್ರಮಗಳು ಬಹಳ ಮೆಚ್ಚುಗೆ ಯಾದದ್ದು. ಸ್ವಾತಂತ್ರ ಚಳುವಳಿಯ ಇತಿಹಾಸವು ಎಲ್ಲಡೆ ತಿಳಿಸುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವೀರಭದ್ರ ಸ್ವಾಮಿ, ನಾಗೇಶ್, ಭೋಜರಾಜ್, ಯಳಂದೂರು ಕೃಷ್ಣ , ಯರಗನಹಳ್ಳಿಮಹೇಶ್, ಅರ್ಜುನ್ ,ಕೀರ್ತಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular