ರಾಯಚೂರು: ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ 332 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, ನೂರಾರು ವಿದ್ಯಾರ್ಥಿಗಳಿಗೆ ಸ್ನಾತಕೋತರ ಪದವಿ ಹಾಗೂ 42 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿಯನ್ನು ರಾಜ್ಯಪಾಲರು ಡಾ. ಥಾವರ್ ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ 25 ಜನ ಸ್ನಾತಕ ಹಾಗೂ 14 ಸ್ನಾತಕೋತರ ಪದವಿಯಲ್ಲಿ 13 ಚಿನ್ನದ ಪದಕಗಳನ್ನು ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು. ಬಿಎಸ್ಸಿ ಅಗ್ರಿಕಲ್ಚರ್ ಸ್ನಾತಕ ಪದವಿಯಲ್ಲಿ ಜ್ಯೋತಿ ತಂದೆ ಬಸವರಾಜ್ ಇವರಿಗೆ ೬ ಚಿನ್ನದ ಪದಕ, ಕೃಷಿ ತಾಂತ್ರಿಕ ವಿಭಾಗದಲ್ಲಿ ಬಿ ಟೆಕ್ ಕೋರ್ಸ್ ನಲ್ಲಿ ಕಾಮಾಕ್ಷಿಚಾಗಿ ಇವರಿಗೆ 5 ಚಿನ್ನದ ಪದಕಕ್ಕೆ ಭಾಜನರಾದರು. ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದ್ದು, ಕೃಷಿಯಲ್ಲಿ ಇನ್ನು ಹೊಸ ಆವಿಷ್ಕಾರ ಮತ್ತು ಹೊಸ ತಳಿಯನ್ನು ಕಂಡುಹಿಡಿಯುವಂತಹ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಟುಂಬಸ್ಥರು ಇವರ ಸಾಧನೆಯನ್ನು ಕಣ್ತುಂಬಿಕೊಂಡರು. ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು, ಆಡಳಿತ ಮಂಡಳಿ ಉಪನ್ಯಾಸಕರು ವಿದ್ಯಾರ್ಥಿಗಳು ಭಾಗಿಗಳಾಗಿದ್ದರು.