Thursday, August 14, 2025
Google search engine

Homeರಾಜ್ಯಸುದ್ದಿಜಾಲದಲಿತರು, ಹಿಂದುಳಿದವರ ಪಾಲಿಗೆ ‘ಅನ್ನರಾಮಯ್ಯ’ ಎಂದೇ ಜನಪ್ರಿಯರು ಸಿಎಂ ಸಿದ್ದರಾಮಯ್ಯ: ದೊಡ್ಡಸ್ವಾಮೇಗೌಡ ಬಣ್ಣನೆ

ದಲಿತರು, ಹಿಂದುಳಿದವರ ಪಾಲಿಗೆ ‘ಅನ್ನರಾಮಯ್ಯ’ ಎಂದೇ ಜನಪ್ರಿಯರು ಸಿಎಂ ಸಿದ್ದರಾಮಯ್ಯ: ದೊಡ್ಡಸ್ವಾಮೇಗೌಡ ಬಣ್ಣನೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ದಲಿತರು, ಹಿಂದುಳಿದ ವರ್ಗದವರು, ಶೋಷಿತರ ಪಾಲಿಗೆ ಅನ್ನರಾಮಯ್ಯ ಎಂದೇ ನಾಡಿನಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದು ಕೆಪಿಸಿಸಿ‌ ಕಾರ್ಯಕಾರಣಿ ಸದಸ್ಯರು ಹಾಗೂ ಎಂಡಿಸಿಸಿ ಬ್ಯಾಂಕ್ ನಿರ್ಧೆಶಕ ದೊಡ್ಡಸ್ವಾಮೇಗೌಡ ಬಣ್ಣಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ 78 ನೇ ವರ್ಷದ ಜನ್ಮ‌ದಿನೋತ್ಸವದ ಅಂಗವಾಗಿ ಕೆ.ಅರ್.ನಗರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ರೋಗಿಗಳಿಗೆ ಹಣ್ಣ ಹಂಪಲ ವಿತರಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ 78 ನೇ ವರ್ಷದ ಜನ್ಮ‌ದಿನೋತ್ಸವದ ಅಂಗವಾಗಿ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಕೆಪಿಸಿಸಿ‌ ಕಾರ್ಯಕಾರಣಿ ಸದಸ್ಯರು ಹಾಗೂ ಎಂಡಿಸಿಸಿ ಬ್ಯಾಂಕ್ ನಿರ್ಧೆಶಕ ದೊಡ್ಡಸ್ವಾಮೇಗೌಡ ರೋಗಿಗಳಿಗೆ ಹಣ್ಣ ಹಂಪಲ ವಿತರಿಸಿದರು.

ರಾಜ್ಯದ ನಾಯಕತ್ವಕ್ಕಷ್ಟೆ ಸೀಮಿತವಾಗದೆ, ದೇಶದ ರಾಜಕೀಯ ಅಗ್ರಗಣ್ಯ ನಾಯಕರಲ್ಲೊಬ್ಬರಾಗಿ ಮುಂಚೂಣಿಯಲ್ಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಕಾಡುತ್ತಿದ್ದ ಹಿಂದುಳಿದ ವರ್ಗಗಳ ನಾಯಕತ್ವದ ಕೊರತೆಯನ್ನು ಸಮರ್ಥವಾಗಿ ತುಂಬಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈಗ ಅಹಿಂದ ವರ್ಗದ ಮಾಸ್ ಲೀಡರ್ ಆಗಿರುವುದು ಗಮನಾರ್ಹ ವಾಗಿದೆ. ಕಳೆದ ಐದು ದಶಕಗಳಿಂದ ಸಮಾಜವಾದ, ಸಮಾಜ ಸುಧಾರಕ ಬಸವಣ್ಣ, ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳಿಗೆ ತಕ್ಕಂತೆ ತಮ್ಮ ಆಡಳಿತದ ಅವಧಿಯಲ್ಲಿ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿರುವ ಸಿದ್ದರಾಮಯ್ಯ ಅವರು, ದೇಶದ ಹಿಂದುಳಿದ ವರ್ಗಗಳ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾಗಿದ್ದಾರೆ.ಎಂದು ಹೇಳಿದರು.

ದೇಶದಲ್ಲಿರುವ ಕೆಲವೇ ಕೆಲವು ಹಿಂದುಳಿದ ವರ್ಗಗಳ ನಾಯಕರಲ್ಲಿ ಈಗ ಕೋಮುವಾದವನ್ನು ಬಲವಾಗಿ ಹಿಮ್ಮೆಟ್ಟಿಸುವ ಮತ್ತು ಅಹಿಂದ ವರ್ಗಗಳ ಪಾಲಿಗೆ ದೊಡ್ಡ ಆಲದಮರದಂತೆ ನಿಂತಿರುವ ಸಿದ್ದರಾಮಯ್ಯ ಅವರಿಗೆ ದಲಿತ, ಅಲ್ಪಸಂಖ್ಯಾತ ಸಮುದಾಯ ದೊಡ್ಡ ಮಟ್ಟದಲ್ಲಿ ಬೆನ್ನಿಗೆ ನಿಂತಿದೆ ಎಂದರು.

ಇದಕ್ಕೂ ಮೊದಲು ವಿವಿದ ದೇವಾಲಯಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿನಲ್ಲಿ ಪೂಜಾ ಸಲ್ಲಿಸಿ ಬಳಿಕ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಲಾಯಿತು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ನಿರ್ದೇಶಕಿ ಸರಿತಾ ಜವರಪ್ಪ, ಕೆ.ಪ್ರಸನ್ನ,, ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಗಂಧನಹಳ್ಳಿ ಹೇಮಂತ್, ಜಿಲ್ಲಾ ಕಾಂಗ್ರೆಸ್ ಕಾನೂನು ಸಲಹೆಗಾರ ಎ.ಆರ್.ಕಾಂತರಾಜ್, ಜಿ.ಪಂ.ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್‌.ಮಹದೇವ್, ಉದಯ್ ಕುಮಾರ್, ತಾಲ್ಲೂಕು ಕಾಂಗ್ರೆಸ್ ವಕ್ತಾರ ಸಯ್ಯದ್ದ್ ಜಾಬೀರ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಚಿ ಮಂಜು, ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಹೆಬ್ಬಾಳು ನಾಗೇಂದ್ರ, ಪುರಸಭೆ ಸದಸ್ಯ ನಟರಾಜು, ಮಾಜಿ ಸದಸ್ಯ ವಿನಯ್, ಸಯ್ಯದ್ದ್ ಅಸ್ಲಂ, ತಾ‌.ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲತಾರವಿ, ಕಾಂಗ್ರೆಸ್ ಮುಖಂಡರಾದ ರಾಜಯ್ತ, ಶ್ರೀರಾಂಪುರ ಆನಂದ್, ಆದರ್ಶ, ಸಾಗರ್, ಸಂಜಯ್, ಅರ್ಜುನಹಳ್ಳಿ ಮಧು, ಮಹದೇವ, ಕೃಷ್ಣೇಗೌಡ, ಕಾಳಿಕುಮಾರ್ , ಪಾಲಾಕ್ಷ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

RELATED ARTICLES
- Advertisment -
Google search engine

Most Popular