ಗುಂಡ್ಲುಪೇಟೆ: ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಯುವ ಘಟಕದ ನೂತನ ಅಧ್ಯಕ್ಷರಾಗಿ ರೋಹಿತ್ ಆಯ್ಕೆಯಾಗಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸುರೇಶ್ ನಾಯಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯುವ ಘಟಕದ ನೂತನ ಅಧ್ಯಕ್ಷರನ್ನಾಗಿ ರೋಹಿತ್ ಅವರನ್ನು ಆಯ್ಕೆ ಮಾಡಲಾಗಿದೆ.
ಯುವ ಘಟಕದ ಪದಾಧಿಕಾರಿಗಳ ಆಯ್ಕೆ: ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಯುವ ಘಟಕದ ನೂತನ ಪದಾಧಿಕಾರಿಗಳಾಗಿ ಕಿಶೋರ್, ಅಭಿಷೇಕ್ ನಾಯಕ್, ನಿಕಿಲ್.ಎಂ, ದೀಪು, ರಕ್ಷಿತ್ ಪಿ.ಎಸ್, ಶಿವಚಂದನ್, ಚೇತನ್, ಚೇತನ್.ಆರ್, ಅರುಣ್ ಕುಮಾರ್, ವಿಶ್ವಾಸ್, ಕೌಶಿಕ್ ನಾಯಕ್, ಮನೋಜ್ ಎಚ್.ಎಂ, ಸನತ್ ಕುಮಾರ್, ಶಶಿ, ಕಿರಣ್, ಮನೋಜ್.ಎಸ್, ವಿಜಯ್, ಮಹಾದೇವ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ವಿ.ನಾಯಕ್, ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜು, ಜಿಲ್ಲಾ ಸಂಘನೆ ಕಾರ್ಯದರ್ಶಿ ಜಗದೀಶ್, ತಾಲೂಕು ಉಪಾಧ್ಯಕ್ಷ ರಮೇಶ್ ಗೌಡ, ಹಂಗಳ ಹೋಬಳಿ ಅಧ್ಯಕ್ಷ ಚೆನ್ನನಾಯಕ, ಸದಸ್ಯರಾದ ಆಟೋ ಗಣೇಶ ಸೇರಿದಂತೆ ಇತರರು ಹಾಜರಿದ್ದರು.