ಮೈಸೂರು : ಸಾಲಾ ಬಾದೆ, ರೈತ ಆತ್ಮಹತ್ಯೆ. ಶುಂಠಿ ಬೆಳೆ ಬೆಳೆದು ಜೀವವನ್ನೇ ಕಳೆದುಕೊಂಡ ರೈತ.
ವಿಷದ ಮಾತ್ರೆ ಸೇವಿಸಿ ರೈತ ಆತ್ಮಹತ್ಯೆ.
ಮೈಸೂರು ತಾಲೂಕಿನ ಧನಗಹಳ್ಳಿಯಲ್ಲಿ ಘಟನೆ. ಮಣಿಕಂಠ (40) ಮೃತ ದುರ್ದೈವಿ ರೈತ. ಬೆಳೆದ ಬೆಳೆ ಕೈಕೊಟ್ಟು ರೈತ ಕಂಗಾಲು. ಬ್ಯಾಂಕುಗಳು ಸೇರಿ ಕೈ ಸಾಲ ಸುಮಾರು ಎಂಟು ಲಕ್ಷ ಮಾಡಿಕೊಂಡಿದ್ದ ರೈತ ಮಣಿಕಂಠ. ಸಾಲಗಾರರ ಬಾದೆ ತಾಳಲಾರದೆ ಮನನೊಂದಿದ್ದ ರೈತ. ಉತ್ತಮ ಬೆಳೆ, ಉತ್ತಮ ಬೆಲೆ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ರೈತನ ಬದುಕಿಗೆ ಕೈ ಕೊಟ್ಟ ಬೆಳೆ, ಬೆಲೆ. ಕೈ ಸಾಲ ಬ್ಯಾಂಕ್ ಸಾಲಗಳನ್ನು ತೀರಿಸಲಾಗಿದೆ ವಿಷದ ಮಾತ್ರೆ ಸೇವಿಸಿ ರೈತ ಆತ್ಮಹತ್ಯೆ.
ಒಂದುವರೆ ಎಕರೆ ಜಮೀನಿನಲ್ಲಿ ಶುಂಠಿ ಬೆಳೆ ಬೆಳೆದಿದ್ದ ರೈತ. ಜಮೀನಿನಲ್ಲೆ ವಿಷದ ಮಾತ್ರೆ ಸೇವಿಸಿ ಮಣಿಕಂಠ ಆತ್ಮಹತ್ಯೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.