ಗುಂಡ್ಲುಪೇಟೆ: ಪಟ್ಟಣದ 14ನೇ ವಾರ್ಡ್‍ನ ನಂದಿನಿ ಎಂಬಾಕೆ ದೈಹಿಕ ಸಮಸ್ಯೆಯಿಂದ ಎರಡು ಕಣ್ಣು ಕಳೆದುಕೊಂಡು ಕುಟುಂಬ ಸಂಕಷ್ಟದಲ್ಲಿದ್ದ ಹಿನ್ನೆಲೆ ಕರ್ನಾಟಕ ಕಾವಲು ಪಡೆ ಸಂಘಟನೆ ವತಿಯಿಂದ ಸಹಾಯ ಹಸ್ತ ಚಾಚುವ ಮೂಲಕ ಆಹಾರ ಪದಾರ್ಥಗಳನ್ನು ನೀಡಲಾಯಿತು.
ಪಟ್ಟಣದ 14ನೇ ವಾರ್ಡ್‍ನ ನಂದಿನಿ ಮನೆಗೆ ಕಾವಲು ಪಡೆ ತಾಲೂಕು ಅಧ್ಯಕ್ಷ ಎ.ಅಬ್ದುಲ್ ಮಾಲಿಕ್ ಹಾಗು ತಂಡದವರು ಆಹಾತ ಪದಾರ್ಥ ನೀಡಿ ನೆರವಿಗೆ ಧಾವಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ, ಎ.ಅಬ್ದುಲ್ ಮಾಲಿಕ್ 23 ವರ್ಷದ ನಂದಿನಿ ಎಂಬಾಕೆ ಎರಡು ಕಣ್ಣಿನ ದೋಷ ಕಳೆದುಕೊಂಡಿರುವುದು ದುರದೃಷ್ಟಕರ. ಈಕೆಯ ಪೋಷಕರು ಸಹ ಕಡುಬಡವರಾಗಿರುವ ಹಿನ್ನೆಲೆ ಕಾವಲು ಪಡೆ ವತಿಯಿಂದ ನೆರವಿಗೆ ಧಾವಿಸಿ, ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥ ನೀಡಿದ್ದೇವೆ ಎಂದು ತಿಳಿಸಿದರು.
ತಾಲೂಕಿನ ಧಾನಿಗಳು ಬಡ ನಂದಿನಿ ನೆರವಿಗೆ ಧಾವಿಸಿ ಕುಟುಂಬಕ್ಕೆ ಆಸರೆಯಾಗಲು ಆರ್ಥಿಕ ಧನ ಸಹಾಯ ಮಾಡಬೇಕೆಂದು ಜನರಲ್ಲಿ ಎ.ಅಬ್ದುಲ್ ಮಾಲಿಕ್ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಾವಲು ಪಡೆ ತಾಲೂಕು ಕಾರ್ಯದರ್ಶಿ ಎಸ್.ಮುಬಾರಕ್, ಸಂಚಾಲಕ ಕುಂಜುಟ್ಟಿ, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಹೆಚ್.ರಾಜು, ಟೌನ್ ಉಪಾಧ್ಯಕ್ಷ ಸಾದಿಕ್ ಪಾಷ, ಟೌನ್ ಸಂಚಾಲಕ ಮಿಮಿಕ್ರಿ ರಾಜು, ಸುರೇಶ್, ಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.