Wednesday, August 13, 2025
Google search engine

Homeರಾಜ್ಯಸುದ್ದಿಜಾಲಸಚಿವ ರಾಜಣ್ಣ ವಜಾ: ಆವಳಿ ನಾಯಕರ ಸಂಘ ಖಂಡನೆ

ಸಚಿವ ರಾಜಣ್ಣ ವಜಾ: ಆವಳಿ ನಾಯಕರ ಸಂಘ ಖಂಡನೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ನೇರನುಡಿ , ನಿಷ್ಟುರವಾದಿ, ಅಂಬೇಡ್ಕರವಾದಿ. ಹಿಂದುಳಿದ ವರ್ಗದ ದಲಿತ ನಾಯಕ ಹಾಗೂ ಸಚಿವರಾಗಿದ್ದ ರಾಜಣ್ಣರವರನ್ನು ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟದಿಂದ ವಜಾಗೊಳಿಸಿರುವುದನ್ನು ಆವಳಿ ತಾಲೂಕು ನಾಯಕರ ಸಂಘವು ಉಗ್ರವಾಗಿ ಖಂಡಿಸುತ್ತದೆ ಎಂದು ಆವಳಿ ತಾಲ್ಲೂಕಿನ ನಾಯಕರ ಸಂಘದ ಅಧ್ಯಕ್ಷರಾದ. ಸುಬ್ಬು ಕೃಷ್ಣ ಹಾಗೂ ಸಿ.ಸಿ.ಮಹದೇವ್ ಜಂಟಿಯಾಗಿ ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷವು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದವರ ಹಿತಕಾಯುವುದಾಗಿ ಹೇಳಿ ಓಟ್ ಪಡೆದು ಪರಿಶಿಷ್ಟರ ಓಟ್‌ನಿಂದ ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟ ಜಾತಿ /ವರ್ಗದವರನ್ನೇ ಹಂತ ಹಂತವಾಗಿ ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ ದೂರಿದರು.

ಈ ಹಿಂದೆಯೂ ಸಹಾ ಪರಿಶಿಷ್ಟ ವರ್ಗದವರ ಕಲ್ಯಾಣಕ್ಕಾಗಿ ಮೀಸಲಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಣವನ್ನು ಲೋಕಸಭಾ ಚುನಾವಣೆಗೆ ದುರ್ಬಳಕೆ ಮಾಡಿಕೊಂಡು ನಂತರ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾಗಿದ್ದ ನಾಗೇಂದ್ರ ಅವರನ್ನು ಮಾತ್ರ ತಪ್ಪಿತಸ್ಥರೆಂಬಂತೆ ಬಿಂಬಿಸಿ ಅವರ ರಾಜಿನಾಮೆ ಪಡೆದಿತ್ತು.

ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ನಾಯಕರಾದ ಶ್ರೀಯುತ ರಾಹುಲ್ ಗಾಂಧಿಯ ನೇತೃತ್ವದಲ್ಲಿ ಲೋಕ ಸಭಾ ಚುನಾವಣೆಯ ಮತಗಳ್ಳತನದ ವಿರುದ್ದ ನಡೆಸುತ್ತಿದ್ದ ಹೋರಾಟದ ಸಂಬಂಧ ನೇರವಾಗಿ ಇದ್ದುದ್ದನ್ನು ಇದ್ದ ಹಾಗೆ ಸಚಿವ ರಾಜಣ್ಣ ವರು ಮಾತನಾಡಿರುವುದನ್ನು ತಡೆಯಲಾರದೆ ಕಾಂಗ್ರೆಸ್ ಪಕ್ಷ ಏಕಾ ಏಕಿ ಸಚಿವ ಸಂಪುಟದಿಂದ ವಜಾಗೊಳಿಸಿರುವುದು ಎಷ್ಟು ಸರಿ ?

ಒಂದು ವೇಳೆ ರಾಜಣ್ಣ ತಪ್ಪು ಮಾಡಿದ್ದೆ ಆದರೆ ಅವರಿಗೆ ಶಿಸ್ತು ಸಮಿತಿಯಿಂದ ನೋಟಿಸ್ ನೀಡಿ ಈ ಸಂಬಂಧ ರಾಜಣ್ಣ ರವರ ಅಭಿಪ್ರಾಯ ಪಡೆದು ಆಮೇಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿತ್ತು ಆದರೆ ಹಾಗೆ ಮಾಡದೆ ಹಿಂದುಳಿದ ವರ್ಗದ ದಲಿತ ನಾಯಕರಾದ ಸಚಿವ ರಾಜಣ್ಣರವರ ವಜಾ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ.

ಪ್ರಜಾ ಪ್ರಭುತ್ವದಲ್ಲಿ ವಾಕ್ ಸ್ವಾತಂತ್ರಕ್ಕೆ ಬೆಲೆ ಇಲ್ಲವೆ ? ಈ ಹಿಂದೆ ಇದ್ದ ಬಿ.ಜೆ.ಪಿ. ಸರಕಾರ ವಾಲ್ಮೀಕಿ ಜಯಂತಿಯನ್ನು ಪ್ರಾರಂಭಿಸಿ, ಪರಿಶಿಷ್ಟರ ಕಲ್ಯಾಣಕ್ಕಾಗಿ ಕೋಟ್ಯಾಂತರ ರೂ.ಗಳನ್ನು ಮೀಸಲಿರಿಸಿತ್ತು. ಆದರೂ ಸಹಾ ಪರಿಶಿಷ್ಟ ಜಾತಿ/ವರ್ಗದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ
ಪರಿಶಿಷ್ಟ ವರ್ಗದಿಂದಲೇ ೧೪ ಶಾಸಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಆದರೆ ಇದ್ಯಾವುದನ್ನು ಪರಿಗಣಿಸದ ಕಾಂಗ್ರೆಸ್ ಪಕ್ಷವು ದಲಿತರನ್ನೇ ಟಾರ್ಗೆಟ್ ಮಾಡುತ್ತಿದೆ.

ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ವವೆಂದಾದರೆ ಈ ಹಿಂದೆ ಕಾಂಗ್ರೆಸ್ ಪಕ್ಷದ ವಿರುದ್ಧ ನೇರವಾಗಿ ಮಾತನಾಡಿದ್ದ ಬಿ.ಆರ್.ಪಾಟೀಲ್, ರಾಯರೆಡ್ಡಿ, ರಾಜೂ ಕಾಗೆ ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲವೇಕೆ ?. ದಲಿತರೆಂದರೆ ಇಷ್ಟೊಂದು ನಿಕೃಷ್ಟವೇಕೆ ?

ರಾಜಣ್ಣರವರು ಮತಗಳ್ಳತನದ ಬಗ್ಗೆ “ನಮ್ಮಿಂದಲೇ ತಪ್ಪಾಗಿದೆ” ಎಂದು ಹೇಳಿರುವ ಹೇಳಿಕೆ ಸತ್ಯದಿಂದ ಕೂಡಿದೆ ಹೇಗೆಂದರೆ ಲೋಕಸಭಾ ಚುನಾವಣೆಯನ್ನು ಕೇಂದ್ರ ಚುನವಣಾ ಆಯೋಗ ನಡೆಸಿದರು ಸಹಾ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವುದು, ಮತದಾರರ ಹೆಸರು ಸೇರಿಸುವುದು, ಮತದಾರರ ಹೆಸರುಕೈಬಿಡುವುದು, ಮತದಾರರ ಪಟ್ಟಿಯನ್ನು ಸಿದ್ದಪಡಿಸುವುದು ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಬ್ಬಂದಿಗಳಲ್ಲವೇ ?

ಪರಿಶಿಷ್ಟರ ಹಿತ ಕಾಯುವುದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮಾಡುತ್ತಿರುವುದಾದರೂ ಏನು? ದಲಿತರ ಹಣವನ್ನು ದುರ್ಬಳಕೆ ಮಾಡುತ್ತಿರುವುದು ಹಾಗೂ ಪರಿಶಿಷ್ಟರ ಮೇಲೆ ವಿನಾಕಾರಣ ಆರೋಪ ಹೊರಿಸಿ ಸಕಾರಣ ನೀಡದೆ ವಜಾಗೊಳಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆಯೇ?

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಣ್ಣರವರನ್ನು ವಜಾಗೊಳಿಸಿರುವ ಸಂಬಂಧ ಯಾವುದೇ ಚಕಾರವೆತ್ತದೆ ಮೌನವಹಿಸಿರುವುದು ಅವರಿಗೆ ಶೋಭೆ ತರುವಂತದ್ದಲ್ಲ. ಕೂಡಲೇ ಕಾಂಗ್ರೆಸ ಸರ್ಕಾರ ರಾಜಣ್ಣರವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಯಾವ ಕಾರಣಕ್ಕಾಗಿ ವಜಾಗೊಳಿಸಲಾಗಿದೆ ಎಂಬುದನ್ನು ಜನತೆಯ ಮುಂದಿಡಬೇಕು.

ಅಲ್ಲದೆ ಇದು ಸಾಧ್ಯವಾಗದಿದ್ದಲ್ಲಿ ಈಗಾಗಲೇ ಖಾಲಿ ಇರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಹಾಗೂ ಸಹಕಾರ ಖಾತೆಯನ್ನು ನಾಯಕ ಸಮುದಾಯದವರಿಗೆ ನೀಡಿ ಆಗಿರುವ ತಪ್ಪನ್ನು ತಿದ್ದಿಕೊಳ್ಳಬೇಕೆಂದು ಸಂಘವು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸುತ್ತದೆ. ಇಲ್ಲವಾದಲ್ಲಿ ನಾಯಕ ಜನಾಂಗ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಈ ಪತ್ರಿಕಾಗೋಷ್ಟಿ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆಯನ್ನು ಸಂಘವು ನೀಡುತ್ತದೆ.

ತಾಲ್ಲೂಕು ನಾಯಕ ಸಮುದಾಯದ ಮುಖಂಡರಾದ ಹಂಪಾಪುರ ಕುಮಾರ್, ಹೊಸಕೋಟೆ ರಾಮನಾಯಕ್, ನಾಗರಾಜು ಇದ್ದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಆವಳಿ ತಾಲ್ಲೂಕಿನ ನಾಯಕರ ಸಂಘದ ಅಧ್ಯಕ್ಷರಾದ. ಸುಬ್ಬು ಕೃಷ್ಣ ಹಾಗೂ ಸಿ.ಸಿ.ಮಹದೇವ್ ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

RELATED ARTICLES
- Advertisment -
Google search engine

Most Popular