Sunday, April 20, 2025
Google search engine

Homeರಾಜ್ಯಸುದ್ದಿಜಾಲಸ್ಮಾರ್ಟ್ ತರಗತಿಗಳ ಕಲಿಕಾ ವಿಧಾನಗಳು ಮತ್ತು ಪರಿಹಾರಗಳ ಒಂದು ದಿನದ ಕಾರ್ಯಾಗಾರ

ಸ್ಮಾರ್ಟ್ ತರಗತಿಗಳ ಕಲಿಕಾ ವಿಧಾನಗಳು ಮತ್ತು ಪರಿಹಾರಗಳ ಒಂದು ದಿನದ ಕಾರ್ಯಾಗಾರ

ಬಳ್ಳಾರಿ : ನಗರದ ಸರಳಾದೇವಿ ಸತೀಶ್ಚಂದ್ರ ಅಗರ್ ವಾಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಅಕ್ಯೂರಾ ಯಕ್ಯೂಪ್ ಮೆಂಟ್ ಬೆಂಗಳೂರು ಅವರ ನೇತೃತ್ವದಲ್ಲಿ, ಸ್ಮಾರ್ಟ್ ತರಗತಿಗಳ ವಿಧಾನಗಳು ಮತ್ತು ಪರಿಹಾರಗಳ ಬಗ್ಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಅಕ್ಯೂರಾ ಯಕ್ಯೂಪ್ ಮೆಂಟ್ ತರಬೇತುದಾರರಾದ ಮಹಮ್ಮದ್ ಅಜುರುದ್ದಿನ್ ಅವರು”ಸ್ಮಾರ್ಟ್ ತರಗತಿಗಳ ಪರಿಹಾರಗಳು ಮತ್ತು ವಿಧಾನಗಳನ್ನ ಬಳಸಿಕೊಳ್ಳುವ ಬಗ್ಗೆ ಅದನ್ನು ಮಕ್ಕಳಿಗೆ ಭೋದನಾ ಮಾಡುವ ವಿಧಾನದ ಜೊತೆಗೆ, ಕಂಟೆಂಟ್ ಬಳಸುವ ಬಗ್ಗೆ. ರಿಮೋಟ್ ಕ್ಲಾಸ್ ಸೇರಿದಂತೆ ಬಹುಮುಖ ತರಗತಿ ಬೋಧನೆಯನ್ನ ಉಪನ್ಯಾಸಕರಿಗೆ ಪ್ರಾಯೋಗಿಕವಾಗಿ ತರಬೇತಿಯನ್ನು ನೀಡಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ, ಸಿರುಗುಪ್ಪ ತಾಲೂಕಿನ  ಸರ್ಕಾರಿ ಪಿಯು ಮತ್ತು ಪದವಿ ಕಾಲೇಜಿನ ಉಪನ್ಯಾಸಕರು ಹಾಗೂ.ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ ವಾಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಂಯೋಜಕರಾದ,ಡಾ. ಶೋಭಾರಾಣಿ ಸೇರಿದಂತೆ ವಿವಿಧ ಕಾಲೇಜಿನ ಉಪನ್ಯಾಸಕರು ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular