ನವದೆಹಲಿ: ನವದೆಹಲಿ ಕೆಂಪುಕೋಟೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಧ್ವಜಾರೋಹಣದೊಂದಿಗೆ ಉದ್ಘಾಟಿಸಿದರು. ಈ ವರ್ಷದ ಘೋಷವಾಕ್ಯ ‘ನಯ ಭಾರತ’, ಸಮೃದ್ಧ, ಸುರಕ್ಷಿತ ಮತ್ತು ಬಲಿಷ್ಠ ದೇಶದ ದೃಷ್ಟಿಕೋಣವನ್ನು ಪ್ರತಿಬಿಂಬಿಸುತ್ತದೆ. ಧ್ವಜಾರೋಹಣಕ್ಕೂ ಮೊದಲು ಪ್ರಧಾನಿ ಮೋದಿ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು. ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸ್ವಾಗತದೊಂದಿಗೆ ಕೆಂಪುಕೋಟೆಗೆ ಆಗಮಿಸಿದರು.
ರಾಷ್ಟ್ರಗೀತೆಯೊಂದಿಗೆ ಎಲ್ಲರೂ ಗೌರವದಿಂದ ಎದ್ದುನಿಂತರು. ಭಾರತೀಯ ವಾಯುಪಡೆಯ Mi-17 ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿ ಪುಷ್ಪವೃಷ್ಟಿ ಗೈದವು. ಒಂದು ಹೆಲಿಕಾಪ್ಟರ್ ತಿರಂಗವನ್ನು ಹಾರಾಡಿಸಿದರೆ, ಇನ್ನೊಂದು ‘ಆಪರೇಷನ್ ಸಿಂಧೂರ್’ ಬ್ಯಾನರ್ ಪ್ರದರ್ಶಿಸಿತು. ಶತ್ರು ರಾಷ್ಟ್ರಗಳಿಗೆ ಸ್ಪಷ್ಟ ಸಂದೇಶ ನೀಡಿದ ಈ ಕಾರ್ಯಕ್ರಮ, ದೇಶಪ್ರೇಮದ ಭಾವನೆಗಳನ್ನು ಮತ್ತಷ್ಟು ಬಲಪಡಿಸಿತು.