Friday, August 15, 2025
Google search engine

Homeರಾಜ್ಯಸುದ್ದಿಜಾಲಶಾಂತಿ ಮಾರ್ಗದಿಂದ ಸ್ವಾತಂತ್ರ್ಯಗಳಿಸಿದ ಅಪರೂಪದ ದೇಶ ನಮ್ಮದು: ರಾಮಲಿಂಗಾ ರೆಡ್ಡಿ

ಶಾಂತಿ ಮಾರ್ಗದಿಂದ ಸ್ವಾತಂತ್ರ್ಯಗಳಿಸಿದ ಅಪರೂಪದ ದೇಶ ನಮ್ಮದು: ರಾಮಲಿಂಗಾ ರೆಡ್ಡಿ

ರಾಮನಗರ: ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆ.೧೫ರ ಶುಕ್ರವಾರ ಆಯೋಜಿಸಲಾಗಿದ್ದ ೭೯ನೇ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಸಾರಿಗೆ, ಮುಜರಾಯಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.


ಅವರು ನೀಡಿದ ಸಂದೇಶದ ಸಾರ ಇಂತಿದೆ: ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಇಂದು ನಾವೆಲ್ಲ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಈ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರು, ಎಲ್ಲಾ ಜನ ಪ್ರತಿನಿಧಿಗಳು, ಅಧಿಕಾರಿ-ನೌಕರರು, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹಾಗೂ ಮಾಧ್ಯಮ ಸ್ನೇಹಿತರಿಗೆ ೭೯ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ.
ಎಲ್ಲಾ ವರ್ಗದ ಜನರೂ ಸಾಮರಸ್ಯದಿಂದ ಬಾಳಬೇಕು. ಮಹಿಳೆಯರೂ ಪುರು?ರಂತೆ ಸ್ವತಂತ್ರವಾಗಿ ಬಾಳುವಂತಾಗಬೇಕು. ಇದು ನನ್ನ ಕನಸಿನ ಭಾರತವಾಗಬೇಕು. ಎಂದು ಮಹಾತ್ಮಗಾಂಧೀಜಿಯವರು ಸ್ವಾತಂತ್ರ್ಯ ಕುರಿತು ಉಲ್ಲೇಖಿಸಿದ್ದರು.


ನಾವು ಕೇವಲ ವ್ಯಕ್ತಿಗಳಲ್ಲ, ಆದರೆ ನಾವು ಜನರ ದೊಡ್ಡ ಸಮುದಾಯದ ಭಾಗವಾಗಿದ್ದೇವೆ ಎಂಬುದನ್ನು ಸ್ವಾತಂತ್ರ್ಯ ದಿನವು ನಮಗೆ ನೆನಪಿಸುತ್ತದೆ. ಬ್ರಿಟೀ?ರ ದಾಸ್ಯದಿಂದ ೧೯೪೭ ಆಗಸ್ಟ್ ೧೫ ರಂದು ಭಾರತ ದೇಶವು ಸ್ವಾತಂತ್ರ್ಯಗೊಂಡ ಈ ಶುಭದಿನವನ್ನು ಪ್ರತಿಯೊಬ್ಬ ಭಾರತೀಯರು ತಮ್ಮ ಅಂತಃಕರಣದಿಂದ ಗೌರವಿಸಬೇಕಿರುತ್ತದೆ ಹಾಗೂ ಪವಿತ್ರ ಭಾವನೆಯೊಂದಿಗೆ ಸ್ಮರಿಸಬೇಕಿರುತ್ತದೆ. ಈ ದೇಶವನ್ನು ಬ್ರಿಟೀ?ರ ಕಪಿಮುಷ್ಠಿಯಿಂದ ಮುಕ್ತಿಗೊಳಿಸಲು ಸಹಸ್ರಾರು ಭಾರತೀಯರು ತಮ್ಮ ತನು-ಮನ-ಧನವನ್ನು ತ್ಯಾಗಮಾಡಿದ್ದಾರೆ. ಈ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಾವಿರಾರು ದೇಶಪ್ರೇಮಿಗಳ ಬಲಿದಾನವೂ ಆಗಿದೆ.
ಭಾರತ ದೇಶ ಬ್ರಿಟೀ?ರ ಆಳ್ವಿಕೆಯಲ್ಲಿದ್ದಾಗ ಸ್ವಾತಂತ್ರ್ಯದ ಕಿಚ್ಚು ನಾಡಿನೆಲ್ಲೆಡೆ ಹರಡಿ ಚಳುವಳಿಯ ರೂಪ ಪಡೆಯಿತು. ಸಾವಿರಾರು ಮಂದಿಯ ಬಲಿದಾನವಾಯಿತು. ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆಯೂ ಕಡಿಮೆಯೆನಿಲ್ಲ.

ಕಿತ್ತೂರು ರಾಣಿ ಚನ್ನಮ್ಮ, ಬೈಲಹೊಂಗಲದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ಬೂದಿ ಬಸಪ್ಪ ನಾಯಕ, ಸುರಪುರದ ವೆಂಕಟಪ್ಪನಾಯಕ, ‘ಕರ್ನಾಟಕದ ಸಿಂಹ’ ಗಂಗಾಧರರಾವ್ ದೇಶಪಾಂಡೆ ಮೊದಲಾದ ಧೀರ ಹೋರಾಟಗಾರರ ತ್ಯಾಗವನ್ನು ನಾವು ಸ್ಮರಿಸಬೇಕಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯು ಸ್ವಾತಂತ್ರ್ಯ ಹೋರಾಟಕ್ಕೆ ಸ್ಮರಣೀಯ ಕಾಣಿಕೆ ನೀಡಿದೆ. ಜಿಲ್ಲೆಯ ಚನ್ನಪಟ್ಟಣಕ್ಕೆ ಮಹಾತ್ಮಗಾಂಧೀಜಿ ರವರು ಎರಡು ಬಾರಿ ಭೇಟಿ ನೀಡಿ, ಇಲ್ಲಿಯ ಜನರಿಗೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಂತೆ ಸ್ಪೂರ್ತಿ ತುಂಬಿದ್ದರು.
ವಿದೇಶಿ ಪತ್ರಕರ್ತರೊಬ್ಬರು ಗಾಂಧೀಜಿಯವರನ್ನು ಭಾರತ ದೇಶಕ್ಕೋಸ್ಕರ ನಿಮ್ಮ ಅಜೆಂಡವೇನು ಎಂದು ಕೇಳಿದಾಗ, ಗಾಂಧೀಜಿಯವರು ಹೇಳುತ್ತಾರೆ.

ಹಿಂದೂ ಮುಸ್ಲಿಮ್‌ರ ಭಾಂದವ್ಯವನ್ನು ಗಟ್ಟಿಗೊಳಿಸುವುದು
ಆಸ್ಪರ್ಶ್ಯತಾ ನಿವಾರಣೆ ಮತ್ತು
ಸ್ವದೇಶಿ ಚಳುವಳಿ.

ಈ ಮೂರು ಧ್ಯೇಯಗಳನ್ನು ಈಡೇರಿಸಲು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಆರಿಸಿಕೊಂಡ ವಿಶ್ವದ ಏಕೈಕ ಹೋರಾಟಗಾರರು ಎಂದರೆ ಮಹಾತ್ಮಾ ಗಾಂಧೀಜಿ ರವರು.
ಇಂದು ದೇಶಾದ್ಯಂತ ಪ್ರಚಲಿತವಿರುವ ಆತ್ಮ-ನಿರ್ಭರ್ ಭಾರತ ಎಂಬ ಪದವನ್ನು ಗಾಂಧೀಜಿಯವರು ೧೦೦ ವರ್ಷಗಳ ಹಿಂದೆಯೇ ಸ್ವದೇಶಿ ಎಂಬುದಾಗಿ ವ್ಯಾಖ್ಯಾನ ಮಾಡಿ ಬ್ರಿಟೀಷ್‌ರ ವಿರುದ್ಧ ಆರ್ಥಿಕ ಕ್ರಾಂತಿಯನ್ನು ಮಾಡಿದ್ದರು.

ಶಾಂತಿ ಮಾರ್ಗದಿಂದ ಸ್ವಾತಂತ್ರ್ಯಗಳಿಸಿದ ಅಪರೂಪದ ಕೀರ್ತಿ ನಮ್ಮ ಭಾರತಕ್ಕೆ ಸಲ್ಲಬೇಕು ಏಕೆಂದರೆ, ವಿಶ್ವದ ಕೈಗಾರಿಕಾ ಕ್ರಾಂತಿಯ ನಂತರ ಬ್ರಿಟನ್ ಅಗಾದ ರೀತಿಯಲ್ಲಿ ಸನ್ನದಗೊಂಡು, ತನ್ನ ಸೇನಾ ಬಲ ಹಾಗೂ ನೌಕಾ ಬಲದಿಂದಾಗಿ ಅದು ಶಕ್ತಿವಂತ ದೇಶವಾಗಿತ್ತು, ಬ್ರಿಟನ್ ಸೇನೆ ಭಾಗವಹಿಸಿದ ಯಾವುದೇ ಯುದ್ಧಗಳಲ್ಲಿ ಅದು ಸೋತ್ತದ್ದೆ ಇಲ್ಲ ಎಂಬಂತಿತ್ತು, ಗಾಂಧೀಜಿ ಹುಟ್ಟುವ ಮೊದಲೇ ಭಾರತದಲ್ಲಿ ನಡೆದ ಶಸಸ್ತ್ರ ಹೋರಾಟಗಳನ್ನು ಬ್ರಿಟಿ?ರು ದಮನಿಸಿದ್ದರು. ಶಸಸ್ತ್ರ ಯುದ್ಧದ ಮೂಲಕ ಬ್ರಿಟಿರನ್ನು ಹಿಮ್ಮೆಟ್ಟಿಸಲು ವ್ಯವಸ್ಥೆಗಳು ಇರಲಿಲ್ಲ. ಗಾಂಧೀಜಿ ಒಬ್ಬ ಮಹಾನ್ ವಾಸ್ತವವಾದಿ ಬ್ರಿಟಿ?ರನ್ನು ಎದುರಿಸಲು ಅಹಿಂಸಾತ್ಮಕ ಹೋರಾಟ ಎಂಬ ಪ್ರಬಲ ಅಸ್ತ್ರವನ್ನು ಕಂಡುಕೊಂಡರು.

ದಕ್ಷಿಣ ಆಫ್ರಿಕಾದಲ್ಲಿ ಸುಮಾರು ೨೧ ವರ್ಷಗಳು ವಕೀಲರಾಗಿದ್ದುಕೊಂಡು, ಅಲ್ಲಿ ಭಾರತೀಯರ ಹಕ್ಕಿಗಾಗಿ ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಹೋರಾಟವನ್ನು ಯಶಸ್ವಿಗೊಳಿಸಿದ್ದರು. ಆನಂತರ ಅವರ ರಾಜಕೀಯ ಗುರುವಾದ ಶ್ರೀ ಗೋಪಾಲಕೃಷ್ಣ ಗೋಖಲೆಯವರ ಕರೆ ಹಾಗೂ ಮಾರ್ಗದರ್ಶನದಂತೆ ಭಾರತ ದೇಶಕ್ಕೆ ೧೯೧೫ರಲ್ಲಿ ಮರಳಿ ಬರುತ್ತಾರೆ.

ಸಂವಿಧಾನ ಶಿಲ್ಪಿ ಡಾ. ಬಿ.ಆರ್‌ಅಂಬೇಡ್ಕರ್ ಅವರ ದೂರದೃಷ್ಟಿಯಿಂದ ರಚಿತವಾದ ನಮ್ಮ ಸಂವಿಧಾನವು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ನಿಲ್ಲಲು ಕಾರಣವಾಗಿದೆ. ಸಂವಿಧಾನದ ಪೂರ್ವ ಪೀಠಿಕೆಯು (Preamble to the constitution) ನಮ್ಮ ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಒಳಗೊಂಡಿದೆ. ನಮ್ಮ ರಾ? ನಿರ್ಮಾತೃಗಳ ಕನಸುಗಳನ್ನು ನನಸಾಗಿಸಲು, ನಾವೆಲ್ಲರೂ ಸೌಹಾರ್ದತೆ ಮತ್ತು ಸಹೋದರತ್ವದ ಮನೋಭಾವದಿಂದ ಮುನ್ನಡೆಯಲು ಅದು ಕಾರಣವಾಗಿದೆ.

ಮಹಾತ್ಮ ಗಾಂಧಿ ಅವರ ಕನಸು ನನಸಾಗಿಸಲು ನಮ್ಮ ಪಕ್ಷ ಹಾಗೂ ಸರ್ಕಾರ ಶ್ರಮಿಸುತ್ತಿದೆ. ಬಡವರ, ಮಹಿಳೆಯರ, ಶೋಷಿತರ, ದಲಿತರ ಸಬಲೀಕರಣಕ್ಕೆ ಒತ್ತು ನೀಡಿದೆ. ಗಾಂಧೀಜಿ ಅವರಿಗೆ ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಗೌರವ ಸಲ್ಲಿಸಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿಯೊಂದು ಅರ್ಹ ಕುಟುಂಬದ ಫಲಾನುಭವಿಗಳಿಗೆ ಅಂದಾಜು ವಾರ್ಷಿಕ ೪೮ ರಿಂದ ೬೦ ಸಾವಿರ ರೂ. ಸೌಲಭ್ಯ ನೇರವಾಗಿ ಲಭಿಸುತ್ತಿದೆ.

ಜಾತಿ, ಮತ, ಧರ್ಮ, ಆಧಾರದ ಭೇದ-ಭಾವಗಳನ್ನು ಮರೆತು ದೇಶದ ವೈವಿಧ್ಯತೆಯನ್ನು ಗೌರವಿಸುತ್ತ, ಅಖಂಡತೆಯನ್ನು ಪಾಲಿಸುತ್ತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕಾಗಿದೆ. ಎಲ್ಲರಿಗೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ದೊರಕಿಸುವ ಮೂಲಕ ರಾಜಕೀಯ ಸ್ವಾತಂತ್ರ್ಯ ಅಬಾಧಿತವಾಗುವಂತೆ ಶ್ರಮಿಸಬೇಕಾಗಿದೆ. ಈ ಗುರಿ ಸಾಧನೆಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯೋಣ. ಸ್ವಸ್ಥ, ಸಮೃದ್ಧ, ಸಮ-ಸಮಾಜದ ನಾಡು ಕಟ್ಟೋಣ.

ರಾಮನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್ ಅವರು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಗ್ರಾಮಾಂತರ ಲೋಕ ಸಭಾ ಕ್ಷೇತ್ರದ ಸಂಸದರಾದ ಡಾ. ಸಿ.ಎನ್. ಮಂಜುನಾಥ್, ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಕೆ. ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚೇತನ್ ಕುಮಾರ್, ರಾಮನಗರ ನಗರಸಭೆ ಅಧ್ಯಕ್ಷರಾದ ಕೆ. ಶೇಷಾದ್ರಿ (ಶಶಿ), ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಉಪವಿಭಾಗಾಧಿಕಾರಿ ಬಿನೋಯ್ ಸೇರಿದಂತೆ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಹಾಸನ್ ರಘು ಹಾಗೂ ಗಣ್ಯರು ವೇದಿಕೆಯಲ್ಲಿದ್ದರು.
ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ಹಾಗೂ ವಿವಿಧ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು. ಅಂಗಾಗ ದಾನ ಮಾಡಿದ ಕುಟುಂಬದವರನ್ನು ಸನ್ಮಾನಿಸಲಾಯಿತು.

RELATED ARTICLES
- Advertisment -
Google search engine

Most Popular