ಮೈಸೂರು: ವಿಜಯನಗರ 2ನೇ ಹಂತದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯ ಆವರಣದಲ್ಲಿಂದು ವಿಶೇಷ ಮಕ್ಕಳಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು.
ಶ್ರೀಸಾಯಿ ರಾಮ್ ಸರ್ವಿಸ್ ಸ್ಟೇಷನ್ ಮಾಲೀಕ ಗಣೇಶ, ಸಂಸ್ಥೆಯ ಹಿತೈಷಿ ರಂಜಿತ್, ಸಂಸ್ಥೆಯ ಮೈಸೂರು ವಿಭಾಗೀಯ ಮುಖ್ಯಸ್ಥ ಶಿವರಾಜು ಸಾಮೂಹಿಕವಾಗಿ ರಾಷ್ಟ ದ್ವಜಾರೋಹಣ ಮಾಡಿದರು.
ನಂತರ ಶ್ರೀಸಾಯಿ ರಾಮ್ ಸರ್ವಿಸ್ ಸ್ಟೇಷನ್ ಮಾಲೀಕ ಗಣೇಶ ಮಾತನಾಡಿ, ಸ್ವಾತಂತ್ರ‍್ಯ ಎಂದರೆ ಪ್ರತಿಯೊಬ್ಬ ವ್ಯಕ್ತಿಗೆ ಈ ಭಾರತದಲ್ಲಿ ಎಲ್ಲ ರೀತಿಯ ಮೂಲಭೂತ ಹಕ್ಕು ಇದೆ. ಎಲ್ಲ ರೀತಿಯ ಸ್ವಾತಂತ್ರ‍್ಯ ಇದೆ. ಆದರೆ ಒಬ್ಬ ವ್ಯಕ್ತಿಯು ತನ್ನ ಸ್ವಾತಂತ್ರ‍್ಯ ಹಕ್ಕಿನಿಂದ ಮತ್ತೊಬ್ಬರ ಸ್ವಾತಂತ್ರ‍್ಯಕ್ಕೆ ಅಡ್ಡಿ ಆಗುವ ಯಾವುದೇ ಕೆಲಸವನ್ನು ಮಾಡಬಾರದು ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡಿರಬೇಕು ಎಂದರು

ಸಂಸ್ಥೆಯ ಹಿತೈಷಿ ರಂಜಿತ್ ಮಾತನಾಡಿ, ಬ್ರಿಟಿಷರಿಂದ ಸ್ವತಂತ್ರಗೊಂಡ ನಂತರ ಭಾರತ ದೇಶವು ಹಲವು ಮೈಲಿಗಲ್ಲುಗಳನ್ನು ಕಂಡಿದೆ. ಆರ್ಥಿಕತೆ, ರಾಜಕೀಯ, ತಂತ್ರಜ್ಞಾನ, ವಿಜ್ಞಾನ, ಮೂಲಸೌಕರ್ಯಗಳು ಹೀಗೆ ಎಲ್ಲಾ ಕ್ಷೇತ್ರಗಳಲ್ಲು ಸಹ ಅನೇಕ ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆ, ಅಭಿವೃದ್ಧಿಗಳ ಸಂಖ್ಯೆ ಸ್ವಾತಂತ್ರ‍್ಯ ಭಾರತದಲ್ಲಿ ಹೆಚ್ಚುತ್ತಲೇ ಇರುತ್ತದೆ ಹೊರತು, ಎಂದಿಗೂ ಇದಕ್ಕೆ ಅಂತ್ಯ ಎನ್ನುವುದಿಲ್ಲ. ಎಲ್ಲಿ ಪ್ರಜೆಗಳಿಗೆ ಸ್ವಾತಂತ್ರ‍್ಯ ಇರುತ್ತದೋ, ಯಾವ ದೇಶದ ಪ್ರಜೆಗಳಿಗೆ ಸ್ವಾತಂತ್ರ‍್ಯ ಇರುತ್ತದೋ, ಎಲ್ಲಿಯವರೆಗೆ ಪ್ರಜೆಗಳು ಸ್ವಾತಂತ್ರ‍್ಯರಾಗಿರುತ್ತಾರೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಒಂದು ಕುಟುಂಬದ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ ಎಂದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗೀಯ ಮುಖ್ಯಸ್ಥ ಶಿವರಾಜು ಮಾತನಾಡಿ, ಆಗಸ್ಟ್ 15 ಇಡೀ ಭಾರತಕ್ಕೆ ಉತ್ಸಾಹ ಮತ್ತು ಸಂತೋಷದ ದಿನವಾಗಿದೆ. ಈ ದಿನ ನಾವು ನಮ್ಮ ಸ್ವಾತಂತ್ರ್ಯ ವನ್ನು ಪರಿಗಣಿಸುತ್ತೇವೆ. ಈ ದಿನವು ಯಾವುದೇ ಜಾತಿ, ಧರ್ಮ , ಪ್ರಾಂತ್ಯ ಮತ್ತು ಸಂಸ್ಕೃತಿಗಿಂತ ದೊಡ್ಡದಾಗಿದೆ. ಇಂದು, ನಾವು ನಮ್ಮ 79 ನೇ ನಮ್ಮ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವಾಗ, ಈ ದಿನದ ಮಹತ್ವವನ್ನು ನಾವು ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಶಾಲೆಯ ಬುದ್ಧಿಮಾಂದ್ಯ ಮಕ್ಕಳಿಂದ ನೃತ್ಯ, ಹಾಡುಗಾರಿಕೆ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸದರಿ ಕಾರ್ಯಕ್ರಮದಲ್ಲಿ ಸಮರ್ಥನಂ ಬುದ್ಧಿ ವಿಕಲಚೇತನ ಶಾಲೆಯ ಮುಖ್ಯೋಪಧಾಯರಾದ ಬ್ರಮಾರಂಬ, ಸಿಬ್ಬಂದಿಗಳಾದ ಎನ್.ಮಂಟೇಶ್, ಚೈತ್ರಕುಮಾರಿ, ಡಾ.ಯಮುನಾ ದೇವಿ, ಸ್ಮೃದುಲ್, ಸ್ಪರ್ಶ, ಮಂಜುಳ, ಮಹದೇವ, ಮನು ವಿಶೇಷ ಶಿಕ್ಷಕರಾದ ಬೃಂದಾ ಬಾಯಿ, ವಿದ್ಯಾವತಿ, ನಿಂಗಮಣಿ ಹಾಗೂ ಮಕ್ಕಳ ಪೋಷಕರು ಸೇರಿದಂತೆ ಮತ್ತಿತರು ಭಾಗವಹಿಸಿದರು.