Saturday, April 19, 2025
Google search engine

Homeರಾಜ್ಯಸುದ್ದಿಜಾಲಭೀಮಾರಾವ್ ಐ.ಎ.ಎಸ್ ಸ್ಟಡಿ ಸರ್ಕಲ್ ತರಬೇತಿ ಸಂಸ್ಥೆಯಿಂದ ಉಚಿತ ಕಾರ್ಯಗಾರ

ಭೀಮಾರಾವ್ ಐ.ಎ.ಎಸ್ ಸ್ಟಡಿ ಸರ್ಕಲ್ ತರಬೇತಿ ಸಂಸ್ಥೆಯಿಂದ ಉಚಿತ ಕಾರ್ಯಗಾರ

ಬಳ್ಳಾರಿ: ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ  ಅಗರ್ ವಾಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ, ಭೀಮ್ ರಾವ್ ಸೇನೆ ಸಂಯುಕ್ತಾಶ್ರಯದಿಂದ ಭೀಮಾರಾವ್ ಐ.ಎ.ಎಸ್. ಸ್ಟಡಿ ಸರ್ಕಲ್ ಮುಖ್ಯಸ್ಥರಾದ ಶೇಖರಪ್ಪ ಅವರ ನೇತೃತ್ವದಲ್ಲಿ ಪದವಿ ಹಂತದ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆ ಉಚಿತ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ್ದ ಇಂಗ್ಲಿಷ್ ಪ್ರಾಧ್ಯಾಪಕರಾದ ಡಾ.ಡಿ.ಸುಧಾಕರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳ ಜೀವನದಲ್ಲಿ ತಮ್ಮ ಪಠ್ಯಕ್ರಮದ ಜೊತೆಗೆ ಭಾರತದ ಇತಿಹಾಸ, ಆರ್ಥಿಕತೆ, ಭೂಗೋಳಶಾಸ್ತ್ರ, ವಿಜ್ಞಾನ, ಗಣಿತಶಾಸ್ತ್ರ,ಪ್ರಚಲಿತ ಘಟನೆಗಳನ್ನು ತಿಳಿದಿರಬೇಕು, ದಿನನಿತ್ಯ ಪತ್ರಿಕೆ ಓದುವ ಅಭ್ಯಾಸ ರೂಡಿಸಿಕೊಳ್ಳಲು ಕರೆ ನೀಡಿದರು.
ನಂತರ ಮಾತನಾಡಿದ ಪೊಲೀಸ್ ಇಲಾಖೆಯ ಚಂದ್ರಶೇಖರ ಹಾಗೂ ಸಹಪ್ರಾಧ್ಯಪಕರಾದ ಡಾ.ಸಿ.ಚನ್ನಬಸಪ್ಪ ಅವರು ಮಾತನಾಡಿ.  ಜಾರ್ಖಂಡ್ ರಾಜ್ಯದಲ್ಲಿ ಆರನೇ ತರಗತಿಯಿಂದಲೆ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮ,ಛಲ ಇರಬೇಕು
ಇಂತಹ ಉಚಿತ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ನಿಮ್ಮ ಜ್ಞಾನವನ್ನ ವೃದ್ಧಿಸಿಕೊಳ್ಳಿ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಓದುತ್ತಿರಬೇಕು. ಮುಖ್ಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಜ್ಞಾನ ಬೆಳೆಸಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ಪರಿಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಎಂದರು.
ಇನ್ನು ಇದೇ ಸಂದರ್ಭದಲ್ಲಿ, LEGAL SSPECTS OF BUSINESS ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಬಡ ವಿದ್ಯರ್ಥಿಗಳಿಗೆ, ಜಿ.ಕೆ. ಫೌಂಡೇಶನ್ ಅಧ್ಯಕ್ಷ ಜಿ.ಕೆ ಸ್ವಾಮಿ (ವಿಜಯ) ರವರಿಂದ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ, ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಹೆಚ್.ಕೆ ಮಂಜುನಾಥ ರೆಡ್ಡಿ, ಜಿ.ಕೆ ಫೌಂಡೇಶನ್ ಅಧ್ಯಕ್ಷ ಜಿ.ಕೆ ಸ್ವಾಮಿ, ರಾಜ್ಯಶಾಸ್ತ್ರ ವಿಭಾಗದ ಡಾ.ಹೊನ್ನೂರಾಲಿ, ನಿರ್ದೇಶಕರು ಭೀಮಾರಾವ್ ಐ.ಎ.ಎಸ್. ಸ್ಟಡಿ ಸರ್ಕಲ್ ಶೇಖರಪ್ಪ ಮತ್ತು ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular