ವರದಿ ರವಿಚಂದ್ರ ಬೂದಿತಿಟ್ಟು
ಪಿರಿಯಾಪಟ್ಟಣ: ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಗುರು ರೇಣುಕಾದೇವಿ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ ಎಂದು ಮುಖ್ಯಶಿಕ್ಷಕ ಪ್ರಸಾದ್ ತಿಳಿಸಿದ್ದಾರೆ.
ಕ್ರೀಡಾಕೂಟದಲ್ಲಿ ಪ್ರಾರ್ಥನ. ಆರ್ ರವರು 600 ಮೀಟರ್ ಓಟದಲ್ಲಿ ಪ್ರಥಮ ,ಉದ್ದ ಜಿತದಲ್ಲಿ ಪ್ರಥಮ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ಕಸಬಾ ಒಂದರ ವೈಯಕ್ತಿಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ , 400 ಮೀಟರ್ ಓಟದಲ್ಲಿ ಬಾಂಧವ್ಯ ಪ್ರಥಮ ಸ್ಥಾನ ಪಡೆದಿದ್ದಾರೆ , ನಿರ್ಮಿತ ಗುಂಡು ಎಸೆತ ಮತ್ತು ತಟ್ಟೆ ಎಸೆತದಲ್ಲಿ ದ್ವಿತೀಯ ಸ್ಥಾನ, 200 ಮೀಟರ್ ಓಟದಲ್ಲಿ ಯಶಸ್ ಗೌಡ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ ಶಾಲಾ ಕೀರ್ತಿ ಹೆಚ್ಚಿಸಿದ ಮಕ್ಕಳಿಗೆ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಅನಿತ್, ಶಾಲಿನಿ, ಮುಖ್ಯ ಶಿಕ್ಷಕರಾದ ರಾಘವೇಂದ್ರ, ದೈಹಿಕ ಶಿಕ್ಷಕರಾದ ಗಿರೀಶ್, ಅಭಿನಂದಿಸಿದರು.