ತುಮಕೂರು:ಮಲ್ಲೇನಹಳ್ಳಿ ಗೊಲ್ಲರಟ್ಟಿಯಲ್ಲಿ ಮೌಡ್ಯ ದ ಹೆಸರಿನಲ್ಲಿ ಬಾಣಂತಿ ಮತ್ತು ನವಜಾತ ಶಿಶುವನ್ನು ಊರ ಆಚೆ ಗುಡಿಸಿಲಿನಲ್ಲಿ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ಬಾಣಂತಿಯ ಗಂಡ, ತಂದೆ -ತಾಯಿ ವಿರುದ್ಧ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹೈಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ನೂರುನ್ನಿಸಾ, ಅಧಿಕಾರಿಗಳ ತಂಡದೊಂದಿಗೆ ಗೊಲ್ಲರಟ್ಟಿಯ ಗುಡಿಸಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಕಂಡು ಕೆಂಡಮಂಡಲರಾಗಿ ನವಜಾತ ಶಿಶುವಿನ ಸಾವಿಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಲ್ಲದೆ ಗುಡಿಸಲು ತೆರವುಗೊಳಿಸುವಂತೆ ಹೇಳಿದರು.
ಅಲ್ಲದೆ ಬಾಣಂತಿಯನ್ನು ಗೊಲ್ಲರಟ್ಟಿಯ ಆಕೆಯ ಮನೆಗೆ ಕಳುಹಿಸಿಕೊಡಲಾಯಿತು. ನಂತರ ಅಧಿಕಾರಿಗಳ ತಂಡ ನ್ಯಾಯಾಧೀಶೆಯೊಂದಿಗೆ ಗೊಲ್ಲರಟ್ಟಿಗೆ ತೆರಳಿ ಆಂಬುಲೆನ್ಸ್ ತರಿಸಿ ಬಾಣಂತಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟು ಗುಣಮುಖವಾಗುವವರೆಗೂ ಸೂಕ್ತ ಚಿಕಿತ್ಸೆ ನೀಡಿ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಗೊಲ್ಲರಹಟ್ಟಿಯ ಶಾಲೆಯ ಆವರಣದಲ್ಲಿ ಕಾಡುಗೊಲ್ಲ ಸಮುದಾಯದ ಜನರು ಮತ್ತು ಮುಖಂಡರ ಜೊತೆ ಸಭೆ ನಡೆಸಿ ಸಂಪ್ರದಾಯದ ಹೆಸರಲ್ಲಿ ಇಂತಹ ಮೌಡ್ಯಾಚರಣೆಗಳು ನಿಲ್ಲಬೇಕು ಎಂದು ತಿಳಿ ಹೇಳಿದರು.