ಬಳ್ಳಾರಿ: ಹಣ ಪಾವತಿಸಿ ಆರೋಗ್ಯ ವಿಮೆ ಪಾಲಿಸಿ ಪಡೆದ ವ್ಯಕ್ತಿಯ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸುವಂತೆ ಬೆಂಗಳೂರಿನ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಸೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.
ಸಿರುಗುಪ್ಪ ತಾಲ್ಲೂಕಿನ ಮಣ್ಣೂರು ಪೋಸ್ಟ್ ಸೂಗೂರಿನ ತಿಲಕ್.ಎಸ್ ಎನ್ನುವವರು ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್, ಬೆಂಗಳೂರು ಇಲ್ಲಿ 2023 ರ ಸೆ.23 ರಿಂದ 2024 ರ ಸೆ.22 ರವರೆಗೆ ರೂ.55,495 ಗಳ ವಿಮಾ ಕಂತು ಪಾವತಿಸಿ ಆರೋಗ್ಯ ವಿಮೆ ಪಾಲಿಸಿ ಪಡೆದುಕೊಂಡಿದ್ದರು.
ಚಾಲ್ತಿಯ ಅವಧಿಯಲ್ಲಿ ಒಳರೋಗಿಯಾಗಿ ಕೊರನರಿ ಆರ್ಟರಿ ಕಾಯಿಲೆಗೆ ಆಂಜಿಯೋಪ್ಲಾಸ್ಟಿ ಮತ್ತು ಸ್ಟಂಟ್ ಅಳವಡಿಕೆ ಚಿಕಿತ್ಸೆ ಪಡೆದಿದ್ದು, ವೆಚ್ಚ ರೂ.4,05,476 ಭರಿಸಿದ್ದರು. ವೆಚ್ಚ ಪಾವತಿಸುವಂತೆ ಕಂಪನಿಗೆ ಕ್ಲೆöÊಮ್ ಅರ್ಜಿ ಸಲ್ಲಿಸದ್ದರು.
ವಿಮಾ ಕಂಪನಿಯು ದೂರುದಾರರು ಪಾಲಿಸಿ ನವೀಕರಣದ ಮುನ್ನ ಹಿಂದೆ ಸಿವಿಎ ಮತ್ತು ಸಿಓಪಿಡಿ ರೋಗಕ್ಕೆ ಚಿಕಿತ್ಸೆ ಪಡೆದಿರುವುದನ್ನು ಮುಚ್ಚಿಟ್ಟು ವಿಮಾ ಷರತ್ತನ್ನು ಉಲ್ಲಂಘನೆ ಮಾಡಿದ್ದಾರೆಂದು ಕ್ಲೆöÊಮ್ ನ್ನು ತಿರಸ್ಕರಿಸಿದ್ದರು.
ಆಯೋಗದ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ ಮತ್ತು ಮಹಿಳಾ ಸದಸ್ಯರಾದ ಮಾರ್ಲಾ ಶಶಿಕಲಾ ಇವರು ಉಭಯ ಪಕ್ಷಗಾರರ ವಾದ ಪ್ರತಿವಾದ ಮತ್ತು ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ದೂರುದಾರರು ಪ್ರಸ್ತುತ ಪಾಲಿಸಿಯ ನವೀಕರಣದ ಮುನ್ನ ಸಿಓಪಿಡಿ ರೋಗಕ್ಕೆ ಚಿಕಿತ್ಸೆ ಪಡೆದಿರುವುದೆಂದು ಪ್ರಮಾಣ ಪತ್ರ ಸಲ್ಲಿಸಿದ್ದು, ಸಂಬAಧಿಸಿದ ವೈದ್ಯರ ಸಾಕ್ಷಿ ಹೇಳಿಕೆಯನ್ನು ದಾಖಲಿಸದಿರುವುದು, ಚಿಕಿತ್ಸೆ ಪಡೆದ ಬಗ್ಗೆ ಸಾಬೀತುಪಡಿಸದೇ ವಿಮಾ ಕಂಪನಿಯು ದೂರುದಾರರ ವೈದ್ಯಕೀಯ ಚಿಕಿತ್ಸೆ ವೆಚ್ಚ ಮೊತ್ತ ರೂ.4,05,476/-ಗಳನ್ನು ಪಾವತಿಸದೇ ಇರುವುದು ಸೇವಾ ನಿರ್ಲಕ್ಷö್ಯತನವಾಗಿದೆ ಎಂದು ಅಭಿಪ್ರಾಯಪಟ್ಟಿತು.
1 ರಿಂದ 3ರ ಎದುರುದಾರರ ವಿಮಾ ಕಂಪನಿಯು ದೂರುದಾರರಿಗೆ ವೈದ್ಯಕೀಯ ಚಿಕಿತ್ಸೆ ವೆಚ್ಚ ರೂ.4,05,476, ಸೇವಾ ನ್ಯೂನ್ಯತೆ ಹಾಗೂ ಮಾನಸಿಕ ಹಿಂಸೆಗೆ ಪರಿಹಾರ ರೂ.10,000 ದೊಂದಿಗೆ ರೂ.5,000 ಗಳ ಪ್ರಕರಣದ ವೆಚ್ಚ ಸೇರಿ 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ ಚಿಕಿತ್ಸೆ ವೆಚ್ಚ ರೂ.4,05,476 ಗಳಿಗೆ ಶೇ.6 ರಷ್ಟು ಬಡ್ಡಿ ಮೊತ್ತ ಪಾವತಿಸಲು ಭಾದ್ಯಸ್ಥರಾಗಿರುತ್ತಾರೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗವು ಆದೇಶಿಸಿದೆ.