ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಚಿಬುಕಹಳ್ಳಿ ಮಹದೇವ ಅವಿರೋಧವಾಗಿ ಬುಧವಾರ ಆಯ್ಕೆಯಾದರು.
ಗ್ರಾ.ಪಂ.ನ ಆಡಳಿತ ಮಂಡಳಿಯ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹದೇವ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಕೆ.ಅರ್.ನಗರ ಪಶು ಸಹಾಯಕ ನಿರ್ದೇಶಕ ಕಲ್ಲಹಳ್ಳಿ ರಾಮು ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು
ಹಾಲಿ ಅಧ್ಯಕ್ಷರಾಗಿದ್ದ ಸೋಮನಹಳ್ಳಿ ಜಗದೀಶ್ ಅವರ ರಾಜೀನಾಮೇ ಯಿಂದ ತೆರವಾದ ಸ್ಥಾನಕ್ಕೆ ಈ ಚುನಾವಣೆ ನಡೆಯಿತು ಚುನಾವಣೆಗೆ ಪಿಡಿಓ ಎ.ಎಸ್.ರಾಜೇಶ್, ಕಾರ್ಯದರ್ಶಿ ಎಸ್.ಆರ್.ಅಶ್ವಿನಿ ಸಹಕಾರ ನೀಡಿದರು.
ಅಧ್ಯಕ್ಷರಾಗಿ ಆಯ್ಕೆಯಾಗಿ ಮಾತನಾಡಿದ ಮಹದೇವ ಗ್ರಾ.ಪಂ.ಗೆ ಶಾಸಕ ಡಿ.ರವಿಶಂಕರ್ ಅವರ ಸಹಕಾರ ದಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರಮಿಸುವುದರ ಜತಗೆ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನ ಮಾಡಿ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಿಗೆ ಅಗತ್ಯ ಮೂಲಭೂತ ಸೌಕರ್ಯಕ್ಕೆ ಶ್ರಮಿಸುವುದಾಗಿ ತಿಳಿಸಿದರು.
ನಂತರ ನೂತನ ಅಧ್ಯಕ್ಷರನ್ನು ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎಂ.ಶಿವಕುಮಾರ್, ಮಾಜಿ ಅಧ್ಯಕ್ಷರಾದ ಎಚ್.ಎಸ್.ವೆಂಕಟೇಶ್, ಸಿ.ಕೆ.ಮಹೇಶ್, ನಿರ್ದೇಶಕರಾದ ಸಿ.ಎ ಗಣೇಶ್, ಸಿ.ಎಸ್.ಶಿವರಾಜ್ ತಾ.ಪಂ.ಮಾಜಿ ಅಧ್ಯಕ್ಷ ಎಚ್.ಡಿ.ಚಿಕ್ಕೇಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಸಿ.ಕೆ.ಬಸವರಾಜ್, ಸೋಮಶೇಖರಪ್ಪ, ಯಜಮಾನರಾದ ರಾಮೇಗೌಡ, ಕರಿಯಯ್ಯ, ಸಿ.ಟಿ.ಶಿವರಾಜ್, ಸೋಮೇಗೌಡ, ಪ್ರಕಾಶ್, ಆರ್.ಮಹೇಶ್, ಪಾಟೀಲ್ , ಸೋಮಶೇಖರ್, ಬಿ.ಎಸ್ ಶೇಖರೇಗೌಡ ಸೇರಿದಂತೆ ಮತ್ತಿತರರು ಅಭಿನಂದಿಸಿದರು
ಚುನಾವಣಾ ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಸುಧಾ ಶಂಕರಪ್ಪ, ಸದಸ್ಯರಾದ ಪಾಪಣ್ಣ, ಎಚ್.ಎಂ.ರತ್ನಮಂಚನಾಯಕ, ಬಿ.ಅರ್.ನಟರಾಜು, ಎನ್.ಕೆ.ಪುನೀತ್, ಮಲ್ಲಿಕಾರ್ಜನ್
ಮಂಗಳ, ಶೋಭರಾಣಿಮಹದೇವ್ , ದೇವೇಂದ್ರ, ರತ್ನಮ್ಮ, ರೇಖಾರಮೇಶ್, ಕೃಷ್ಣಶೆಟ್ಟಿ, ಗಿರಿಜಮ್ಮ ಇದ್ದರು
ಮುನ್ನೆಚ್ಚರಿಕೆ ಕ್ರಮವಾಗಿ ಚುಂಚನಕಟ್ಟೆ ಉಪಠಾಣೆ ಮುಖ್ಯಪೇದೆ ದೊರೆಸ್ವಾಮಿ, ಸಾಲಿಗ್ರಾಮ ಪೊಲೀಸ್ ಠಾಣೆಯ ಮುಖ್ಯಪೇದೆ ಮಂಜುನಾಥ, ಸಿಬ್ಬಂದಿ ಅವಿನಾಶ್ ಅವರು ಬಿಗಿ ಭದ್ರತೆ ಏರ್ಪಡಿಸಿದ್ದರು.